‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಅವರು ಸು ಫ್ರಮ್ ಸೋ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀ್ಕಷೆ ಮೂಡುವಂತೆ ಆಗಿತ್ತು. ಈ ಚಿತ್ರದ ಟ್ರೇಲರ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈಗ ‘ಸು ಫ್ರಮ್ ಸೋ’ ಯಶಸ್ಸನ್ನು ರಾಜ್ ಅವರು ಹಸ್ತಾಂತರ ಮಾಡಿದ್ದಾರೆ.
ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ 100 ಕೋಟಿ ಗಳಿಸಿದ್ದು ಗೊತ್ತೇ ಇದೆ. ಈ ಚಿತ್ರದ ಮೊದಲ ಸಾವಿರ ರೂಪಾಯಿ ಕಲೆಕ್ಷನ್ ಪೈಕಿ ಒಂದು 500 ರೂಪಾಯಿ ನೋಟನ್ನು ‘45’ ಚಿತ್ರದ ನಿರ್ದೇಶಕ ಅರ್ಜುನ್ ಜನ್ಯಗೂ, ಎರಡನೇ ನೋಟನ್ನು ನಿರ್ಮಾಪಕರಿಗೂ ಹಸ್ತಾಂತರ ಮಾಡಿದ್ದಾರೆ ರಾಜ್. ಈ ಮೂಲಕ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 16, 2025 08:04 AM
