ಶಿವಕುಮಾರ್ ಕಾಣಲು ಬಂದಾಗ ನಾಪತ್ತೆಯಾಗಿದ್ದ ರಾಜಣ್ಣನವರು ಜಾರಕಿಹೊಳಿ ಮನೆ ಸಭೆಯಲ್ಲಿ ಪ್ರತ್ಯಕ್ಷ!

|

Updated on: Mar 05, 2025 | 12:45 PM

ಶಿವಕುಮಾರ್ ತಮ್ಮ ಆಫೀಸಿಗೆ ಬಂದಾಗ ನಾಪತ್ತೆಯಾಗಿದ್ದ ರಾಜಣ್ಣ, ನಿನ್ನೆ ಸಾಯಂಕಾಲ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದ ವಾಲ್ಮೀಕಿ ಶಾಸಕರ ಸಭೆಯಲ್ಲಿ ಹಾಜರಿದ್ದರು. ಅದು ಹೇಗೆ ರಾಜಣ್ಣ ಸರ್? ಅಂತ ಕೇಳಿದರೆ, ಮುಖ ಸಿಂಡರಿಸಿಕೊಳ್ಳುವ ಸಚಿವ ಅಯ್ಯೋ ತಾನು ಅಲ್ಲಿಗೆ ಹೋಗಿದ್ದು ಸಾಯಂಕಾಲ 9 ಗಂಟೆಗೆ ಅನ್ನುತ್ತಾರೆ. ಸ್ವಾಮೀಜಿಯವರು ಸಭೆ ಕರೆದಿದ್ದು ಅಂತಲೂ ಸಚಿವ ಹೇಳುತ್ತಾರೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಹಕಾರ ಸಚಿವ ಕೆಎನ್ ರಾಜಣ್ಣ ನಡುವೆ ಸಮರ ಜಾರಿಯಲ್ಲಿದೆ. ಅದು ಬಹಿರಂಗವಾಗಿ ನಡೆಯುತ್ತಿರುವುದರಿಂದ ಶೀತಲ ಸಮರ (cold war) ಅಂತ ಹೇಳಲಾಗದು. ನಿನ್ನೆ ಹಾಸನದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನ ಬದಲಾವಣೆ ಕುರಿತಂತೆ ಶಿವಕುಮಾರ್ ಅವರು ರಾಜಣ್ಣರನ್ನು ಭೇಟಿಯಾಗಲು ಅವರ ಆಫೀಸಿಗೆ ಹೋದಾಗ ರಾಜಣ್ಣ ಅಲ್ಲಿರಲಿಲ್ಲ. ಯಾಕೆ ಸರ್ ಅಂತ ಕೇಳಿದರೆ, ಆರೋಗ್ಯ ಸರಿಯಿರಲಿಲ್ಲ, ಹಾಗಾಗಿ ಮಗಳ ಮನೆ ಹತ್ತಿರವಿರುವ ವೈದ್ಯರನ್ನು ಕಾಣಲು ಹೋಗಿದ್ದೆ ಎನ್ನುತ್ತಾರೆ. ತಾವು ಭೇಟಿ ನೀಡುವ ಬಗ್ಗೆ ಶಿವಕುಮಾರ್ ಮುನ್ಸೂಚನೆ ನೀಡಿರಲಿಲ್ಲವೇ? ಅವರೇ ಹೇಳಬೇಕು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಎಐಸಿಸಿ ಹೆಸರು ದುರ್ಬಳಕೆ ಮಾಡುವುದು ಬೇಡ: ಡಿಸಿಎಂ ಡಿಕೆ ಶಿವಕುಮಾರ್​ಗೆ ಸಚಿವ ಕೆಎನ್ ರಾಜಣ್ಣ ಖಡಕ್ ತಿರುಗೇಟು