Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Budget Session: ಸಚಿವ ಮಹೇದವಪ್ಪಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಲಾಗುತ್ತಿಲ್ಲ: ಅಶೋಕ

Karnataka Budget Session: ಸಚಿವ ಮಹೇದವಪ್ಪಗೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸಲಾಗುತ್ತಿಲ್ಲ: ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 05, 2025 | 1:36 PM

ಅಶೋಕ ಜೊತೆ ಧ್ವನಿ ಬೆರೆಸುವ ಕಾರ್ಕಳ ಶಾಸಕ ಸುನೀಲ ಕುಮಾರ, ಸಚಿವ ಮಹಾದೇವಪ್ಪ ಗಾಳಿಯಲ್ಲಿ ಉತ್ತರ ನೀಡಿದರೆ ನಡೆಯಲ್ಲ, ಗಂಗೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತದೆ, ಅದರೆ ಗಂಗಾ ಕಲ್ಯಾಣ ಯೋಜನೆ ಜಾರಿಗೊಳಿಸದೆ ನಿಷ್ಕ್ರಿಯತೆ ಪ್ರದರ್ಶಿಸುತ್ತದೆ, ಮಹಾದೇವಪ್ಪನವರು ಯೋಜನೆ ಅನುಷ್ಠಾನಕ್ಕೆ ತರಲು ಅಸಹಾಯಕತೆ ಎದುರಿಸುತ್ತಿದ್ದರೆ ಅದನ್ನು ಸದನದ ಗಮನಕ್ಕೆ ತರಲಿ ಎಂದರು.

ಬೆಂಗಳೂರು, ಮಾರ್ಚ್ 5: ವಿಧಾನಸಭಾ ಬಜೆಟ್ ಅಧಿವೇಶನದ ಇಂದಿನ ಕಲಾಪದಲ್ಲಿ ಬಿಜೆಪಿ ಶಾಸಕರು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಮೇಲೆ ಮುಗಿಬಿದ್ದ ಪ್ರಸಂಗ ನಡೆಯಿತು. ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಅಡಿ ಕೊಳವೆ ಬಾವಿಗಳನ್ನು ಕೊರೆದಿಲ್ಲ ಅಂತ ಹೇಳಿದಾಗ ಮಹಾದೇವಪ್ಪ ಸಮಜಾಯಿಷಿ ಮತ್ತು ಉತ್ತರ ನೀಡುತ್ತಾರೆ. ಆಗ ವಿಪಕ್ಷ ನಾಯಕ ಆರ್ ಅಶೋಕ ಎದ್ದು ನಿಂತು ಮಹಾದೇವಪ್ಪನವರು ಮಲೆ ಮಹದೇಶ್ವರ ಕ್ಷೇತ್ರದಿಂದ ಬರುತ್ತಾರೆ, ಆದರೆ ಅವರ ತಲೆ ಮೇಲೆ ಗಂಗೇನೇ ಇಲ್ಲ, ಅವರ ಉಪ ಮುಖ್ಯಮಂತ್ರಿ ಮಾಡಿದ ಕರ್ಮಗಳೆಲ್ಲ ತೊಳ್ಕೊಂಡು ಹೋಗಲಿ ಅಂತ ಗಂಗೆಯಲ್ಲಿ ಮುಳುಗು ಹಾಕಿ ಬರುತ್ತಾರೆ. ಆದರೆ ಇಲ್ಲಿ ನೋಡಿದರೆ ಬರೀ ಬರಗಾಲ ಎಂದು ಕುಹುಕವಾಡುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Karnataka Budget Session; ಕನ್ನಡಕ್ಕೆ ದ್ರೋಹ ಬಗೆದಿರುವ ಅಧಿಕಾರಿಯ ವಿರುದ್ಧ ನಾಲಗೆ ಕಟ್ ಮಾಡುವ ರೀತಿಯಲ್ಲಿ ಕ್ರಮ ಜರುಗಿಸಬೇಕು: ಅಶೋಕ