ಮಂಡ್ಯದ ಸಾಫ್ಟ್ವೇರ್ ಇಂಜಿನೀಯರ್ ಶಶಾಂಕ್ ಬದುಕಲ್ಲಿ ಬಹಳ ಕ್ರೂರ ಆಟವಾಡಿದ ವಿಧಿ!
ಮದುವೆಯ ದಿನವೇ ಶಶಾಂಕ್ ಜ್ವರದಿಂದ ನರಳುತ್ತಿದ್ದರು ಎಂದು ಅವರ ಸ್ನೇಹಿತರು ಹೇಳುತ್ತಾರೆ. ಅವರ ಸಂಬಂಧಿಯೊಬ್ಬರು ಹೇಳುವ ಪ್ರಕಾರ ನಿನ್ನೆ ಬೆಂಗಳೂರಲ್ಲಿ ಅವರು ತುಂಬಾ ಎದೆನೋವು ಅಂತ ದೂರಿದ ಕಾರಣ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಅದರೆ ಆಸ್ಪತ್ರೆಗೆ ಹೋದ ಶಶಾಂಕ್ ಗುಣವಾಗಿ ಹೊರಬಾರದೆ ಶವವಾಗಿ ಬಂದಿದ್ದಾರೆ.
ಮಂಡ್ಯ, ಮಾರ್ಚ್ 5: ವಿಧಿ ಕ್ರೂರಿ ನಿಜ ಆದರೆ ಮಂಡ್ಯದ ಶಶಾಂಕ್ (Shashank) ಬದುಕಲ್ಲಿ ಅದು ಇಷ್ಟು ಕ್ರೌರ್ಯ ಮೆರೆದೀತು ಅಂತ ಅವರ ಕುಟುಂಬದವರು ಅಂದುಕೊಂಡಿರಲಿಕ್ಕಿಲ್ಲ. ಬೆಂಗಳೂರಿನ ಐಟಿ ಸಂಸ್ಥೆಯೊಂದರಲ್ಲಿ ಸಾಫ್ಟ್ವೇರ್ ಇಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಜಾರ್ಖಂಡ್ ಮೂಲದ ಅಷ್ಣಾ ಹೆಸರಿನ ಯುವತಿಯನ್ನು ಪ್ರೀತಿಸಿ ಕಳೆದ ಭಾನುವಾರವಷ್ಟೇ ಮೈಸೂರಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾಗಿದ್ದರು. ಅದರೆ ಮದುವೆಯಾದ ಕೇವಲ ಮೂರು ದಿನಗಳ ನಂತರ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂದರೆ ನಂಬಲು ಸಾಧ್ಯವೇ? ವಿಧಿ ಇಷ್ಟೊಂದು ಕ್ರೂರಿಯಾಗುವುದು ಹೇಗೆ ಸಾಧ್ಯ ಅಂತ ಅಷ್ಣಾ, ಸಂಬಂಧಿಕರು ಮತ್ತು ಸ್ನೇಹಿತರು ಕೇಳುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Viral Video: ಮದುವೆಯಲ್ಲಿ ಖುಷಿಯಿಂದ ಕುಣಿಯುತ್ತಿದ್ದ ವೇಳೆ ಹೃದಯಾಘಾತ, ಯುವತಿ ಸಾವು