ರಾಜಣ್ಣ ರಾಜೀನಾಮೆಯಿಂದ ನೋವಾಗಿದೆ, ಆದರೆ ಇದು ಪಕ್ಷದ ತೀರ್ಮಾನ: ಡಿಕೆ ಶಿವಕುಮಾರ್

Updated on: Aug 11, 2025 | 8:27 PM

ಶಿವಕುಮಾರ್ ಮತ್ತು ರಾಜಣ್ಣ ನಡುವೆ ಸಂಬಂಧ ಹೇಗಿತ್ತು ಅಂತ ಕನ್ನಡಿಗರಿಗೆ ಗೊತ್ತಿಲ್ಲದೇನೂ ಇಲ್ಲ, ರಾಜಣ್ಣರನ್ನು ಸಂಪುಟದಿಂದ ವಜಾ ಮಾಡಿರುವ ಹಿಂದೆ ಕೆಪಿಸಿಸಿ ಅಧ್ಯಕ್ಷರ ಜೊತೆಯಿದ್ದ ತಿಕ್ಕಾಟವೇ ಕಾರಣ ಎಂದು ಚರ್ಚೆಯಾಗುತ್ತಿದೆ, ಆದರೆ ಇದೊಂದೇ ಕಾರಣಕ್ಕೆ ಅವರು ರಾಜೀನಾಮೆ ಸಲ್ಲಿಸಬೇಕಾಗಿ ಬಂದಿದ್ದರೆ, ಬಹಳ ಹಿಂದೆಯೇ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಬೇಕಿತ್ತು. ಸದ್ಯಕ್ಕಂತೂ ರಾಜೀನಾಮೆ ಹಿಂದಿನ ಸ್ಪಷ್ಟ ಕಾರಣ ಗೊತ್ತಾಗುತ್ತಿಲ್ಲ.

ಬೆಂಗಳೂರು, ಆಗಸ್ಟ್ 11: ರಾಜಣ್ಣ ಅವರಿಂದ ಯಾಕೆ ರಾಜೀನಾಮೆ ಪಡೆಯಲಾಗಿದೆಯೋ ಗೊತ್ತಿಲ್ಲ, ಇದು ಪಕ್ಷದ ನಿರ್ಧಾರ, ಬೇರೆ ಯಾವುದೇ ವಿಚಾರ ನನಗೆ ಗೊತ್ತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ನನಗೊಂದು ಮಾಹಿತಿ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಶಾಸಕರು ಮತ್ತು ಮಂತ್ರಿಗಳು ನನ್ನ ವ್ಯಾಪ್ತಿಗೆ ಬರಲ್ಲ, ಶಾಸಕಾಂಗ ಪಕ್ಷದ ನಾಯಕರು ಮುಖ್ಯಮಂತ್ರಿಯವರಾಗಿರುತ್ತಾರೆ, ಹಾಗಾಗಿ ಈ ವಿಚಾರ ಅವರಿಗೆ ಸಂಬಂಧಿಸಿದ್ದು ನನಗಲ್ಲ ಎಂದ ಶಿವಕುಮಾರ್, ರಾಜಣ್ಣ ಮತ್ತು ನಾನು ಕಳೆದ 25 ವರ್ಷಗಳಿಂದ ಸ್ನೇಹಿತರು, ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ, ಅವರ ರಾಜೀನಾಮೆಯಿಂದ ನನ್ನ ಮನಸ್ಸಿಗೂ ನೋವಾಗಿದೆ, ಆದರೇನು ಮಾಡೋದು? ಇದು ಪಕ್ಷದ ತೀರ್ಮಾನ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:   ಬೆಂಗಳೂರು ಒಂದು ಗ್ಲೋಬಲ್ ಸಿಟಿ ಅನ್ನೋದನ್ನು ಪಿಎಂ ಮೋದಿ ಅರ್ಥಮಾಡಿಕೊಂಡಿದ್ದಾರೆ: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ