ಆಘಾತಕ್ಕೊಳಗಾಗಿ ತೀವ್ರ ಬೇಸರದಲ್ಲಿ ಪ್ರತಿಕ್ರಿಯಿಸುತ್ತಿರುವ ರಾಜಣ್ಣ ಅಭಿಮಾನಿ ಮತ್ತು ಬೆಂಬಲಿಗರು
ರಾಜಣ್ಣನವರ ರಾಜೀನಾಮೆಯಿಂದ ತೀವ್ರವಾಗಿ ಬೇಸರಗೊಂಡಿರುವ ಮಹಿಳಾ ಅಭಿಮಾನಿಯೊಬ್ಬರು, ಅವರು ರಾಜೀನಾಮೆ ಸಲ್ಲಿಸಬಾರದಿತ್ತು, ಅವರ ರಾಜೀನಾಮೆಯಿಂದ ಬಹಳ ನೋವಾಗಿದೆ, ಅವರು ಪುನಃ ತಮ್ಮ ಪದವಿಯನ್ನು ಪಡೆದುಕೊಳ್ಳುವಂತಾಗಬೇಕು, ಮತ್ತು ಇದಕ್ಕೂ ಹೆಚ್ಚಿನ ಹುದ್ದೆಯ ಮೂಲಕ ವಾಪಸ್ಸಾಗಬೇಕು ಎಂದು ಹೇಳುತ್ತಾರೆ. ತಮ್ಮ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ರಾಜಣ್ಣ ಹೇಳಿದ್ದಾರೆ.
ತುಮಕೂರು, ಆಗಸ್ಟ್ 12: ಹಿರಿಯ ಕಾಂಗ್ರೆಸ್ ನಾಯಕ ಕೆಎನ್ ರಾಜಣ್ಣ (KN Rajanna) ಅವರನ್ನು ಸಂಪುಟದಿಂದ ವಜಾ ಮಾಡಿದ್ದು ರಾಜ್ಯದೆಲ್ಲೆಡೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ತುಮಕೂರುನಲ್ಲಿ ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಈ ದಿಢೀರ್ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿದ್ದಾರೆ ಮತ್ತು ನೊಂದಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅಭಿಮಾನಿಯೊಬ್ಬರು, ತಮ್ಮನ್ನು ವಜಾ ಮಾಡಿದ್ದರೂ ರಾಜಣ್ಣ ನೇರ ಮಾತುಗಾರಿಕೆ ಮತ್ತು ನಿಷ್ಠುರತೆಯಿಂದ ವಿಮುಖಲಾಗಲಾರರು, ತಳ ಸಮುದಾಯಗಳಿಗಾಗಿ ಅವರಷ್ಟು ಬೇರೆ ಯಾರೂ ದುಡಿದಿಲ್ಲ, ತಮ್ಮ ಮೇಲೆ ಅಪವಾದ ಬಂದರೆ ಸಹಿಸಿಕೊಳ್ಳದ ಜಾಯಮಾನ ಆವರದ್ದು, ಅವರ ವಿರುದ್ಧ ಪಕ್ಷದವರೇ ಮಾಡುತ್ತಿರುವ ಹುನ್ನಾರವನ್ನು ಹೈಕಮಾಂಡ್ ಮನಗಾಣಬೇಕು ಎಂದು ಹೇಳುತ್ತಾರೆ.
ಇದನ್ನೂ ಓದಿ: ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ, ಪಿತೂರಿ ಇದೆ: ಕೆಎನ್ ರಾಜಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

