‘ರಾಜ್​ಕುಮಾರ್​ ಸಂಭಾವನೆ 5 ಸಾವಿರದಿಂದ 10 ಸಾವಿರ ಆಗಲು ಹತ್ತು ಸಿನಿಮಾ ಮಾಡಿದ್ರು’

| Updated By: ರಾಜೇಶ್ ದುಗ್ಗುಮನೆ

Updated on: Jan 24, 2022 | 7:27 PM

, ಸ್ಟಾರ್​ ನಟರ ಸಂಭಾವನೆ ಹೆಚ್ಚುತ್ತಲೇ ಇದೆ. ಆದರೆ, ಅಂದಿನ ಕಾಲದಲ್ಲಿ ಹಾಗಿರಲಿಲ್ಲ. ರಾಜ್​ಕುಮಾರ್​ ಆಗಿನ ಕಾಲದಲ್ಲಿ ಐದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.

ಸ್ಯಾಂಡಲ್​ವುಡ್​ (Sandalwood) ಮಾರುಕಟ್ಟೆ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಸ್ಟಾರ್​ ನಟರ ಸಿನಿಮಾಗಳು ಕೋಟಿಕೋಟಿ ಕಮಾಯಿ ಮಾಡುತ್ತವೆ. ಒಟಿಟಿ ಹಕ್ಕು, ಡಬ್ಬಿಂಗ್​ ಹಕ್ಕು, ಚಿತ್ರಮಂದಿರದ ಕಲೆಕ್ಷನ್​ ಸೇರಿದರೆ ದೊಡ್ಡ ಮಟ್ಟದಲ್ಲಿ ಗಳಿಕೆ ಆಗುತ್ತದೆ. ಹೀಗಾಗಿ, ಸ್ಟಾರ್​ ನಟರ ಸಂಭಾವನೆ ಹೆಚ್ಚುತ್ತಲೇ ಇದೆ. ಆದರೆ, ಅಂದಿನ ಕಾಲದಲ್ಲಿ ಹಾಗಿರಲಿಲ್ಲ. ರಾಜ್​ಕುಮಾರ್​ ಆಗಿನ ಕಾಲದಲ್ಲಿ ಐದು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದರು. ಅದನ್ನು ಹತ್ತು ಸಾವಿರಕ್ಕೆ ಏರಿಕೆ ಮಾಡಿಕೊಳ್ಳಲು ಅವರು 10 ಸಿನಿಮಾ ಮಾಡಬೇಕಾಯಿತು. ಈ ಬಗ್ಗೆ ಹಿರಿಯ ನಟ ಬೆಂಗಳೂರು ನಾಗೇಶ್ (Bangalore Nagesh)​ ಅವರು ಮಾತನಾಡಿದ್ದಾರೆ. ‘ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಾಗೇಶ್​ ಅವರು ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದರು. ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ. 

ಇದನ್ನೂ ಓದಿ: ‘ಸಿನಿಮಾ ರಂಗದಲ್ಲಿ ನಮ್ಮಂಥ ಹಳಬರಿಗೆ ಈಗ ಅವಕಾಶವಿಲ್ಲ’; ಹಿರಿಯ ನಟನ ಬೇಸರ

ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್​ವುಡ್​ ಸುಂದರಿಯ ಕ್ಯೂಟ್​ ಫೋಟೋ ಆಲ್ಬಂ