Hasanambe Darshan: ಮೊದಲ ದಿನವೇ ಹಾಸನಾಂಬೆಯ ದರ್ಶನ ಮಾಡಿಕೊಂಡ ರಾಜಮಾತೆ ಪ್ರಮೋದಾ ದೇವಿ

|

Updated on: Oct 25, 2024 | 1:36 PM

ಭಕ್ತರಿಗಾಗಿ ಹಾಸನ ಹಾಸನಾಂಬೆಯ ದರ್ಶನ ಇಂದು ಬೆಳಗ್ಗೆ 4 ಗಂಟೆಯಿಂದ ಅರಂಭಗೊಂಡಿದೆ ಮತ್ತು ಬೇರೆ ರಾಜ್ಯಗಳಿಂದಲೂ ಆಗಮಿಸುವ ಭಕ್ತರು ರಾತ್ರಿ 11 ಗಂಟೆಯವರೆಗೆ ದೇವಿಯ ದರ್ಶನ ಪಡೆಯಬಹುದು. ಹಾಸನಾಂಬೆ ದೇವಸ್ಥಾನವು ಈ ಬಾರಿ ಹತ್ತು ದಿನಗಳವರೆಗೆ ಮಾತ್ರ ತೆರೆದಿರುತ್ತದೆ.

ಹಾಸನ: ಹಿಂದಿನ ಮೈಸೂರು ಒಡೆಯರ್ ಅರಸೊತ್ತಿಗೆಯ ರಾಜವಂಶಸ್ಥರು ಅಪಾರ ದೈವಭಕ್ತರಾಗಿದ್ದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲಿನ ರಾಜಮಾತೆ ಪ್ರಮೋದಾ ದೇವಿಯವರು ಮೊದಲ ದಿನವೇ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದರು. ಈಗಾಗಲೇ ವರದಿ ಮಾಡಿರುವಂತೆ ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುವ ಹಾಸನಾಂಬೆ ದೇಗುಲ ನಿನ್ನೆಯಷ್ಟೇ ಓಪನ್ ಆಗಿದ್ದು ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿಯು ಸರ್ಕಾರೀ ಮರ್ಯಾದೆಗಳೊಂದಿಗೆ ರಾಜಮಾತೆ ಪ್ರಮೋದಾದೇವಿಯವರನ್ನು ಬರಮಾಡಿಕೊಂಡಿತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Hasanamba Darshan: ಹಾಸನಾಂಬೆ ಉಘೇ ಉಘೇ; ಹಾಸನಾಂಬಾ ಸನ್ನಿಧಿಯಲ್ಲಿ ಭಕ್ತರ ಹರ್ಷೋದ್ಘಾರ

Follow us on