ಅಪ್ಪ ಬುಲೆಟ್ ಪ್ರಕಾಶ್ರ ಕೊನೆಯ ಸಿನಿಮಾ ಬಗ್ಗೆ ರಕ್ಷಕ್ ಮಾತು
Bullet Prakash: ನಟ ಬುಲೆಟ್ ಪ್ರಕಾಶ್ ನಟಿಸಿದ ಕೊನೆಯ ಸಿನಿಮಾ ‘ಮೆಹಬೂಬ’ ಬಗ್ಗೆ ಅವರ ಪುತ್ರ ರಕ್ಷಕ್ ಮಾತನಾಡಿದ್ದು ಹೀಗೆ. ಮೆಹಬೂಬ ಸಿನಿಮಾದಲ್ಲಿ ಮಾಜಿ ಬಿಗ್ಬಾಸ್ ವಿನ್ನರ್ ಶಶಿ ನಾಯಕ.
ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ (Rakshak) ನಟನಾಗಿ ಜನಪ್ರಿಯರಾಗಿರುವ ಜೊತೆಗೆ ಸಾಮಾಜಿಕ ಜಾಲತಾಣದಿಂದಲೂ ಬಹಳ ಫೇಮಸ್ ಆಗಿದ್ದಾರೆ. ಇತ್ತೀಚೆಗಷ್ಟೆ ಬಿಗ್ಬಾಸ್ಗೂ ಹೋಗಿ ಬಂದಿರುವ ರಕ್ಷಕ್ರ ವರ್ಚಸ್ಸು ಇನ್ನಷ್ಟು ಹೆಚ್ಚಿದೆ. ಇದೀಗ ಬಿಗ್ಬಾಸ್ ಕನ್ನಡ ಸೀಸನ್ 10ರ ಹಲವು ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಸೇರಿದ್ದರು, ಅದಕ್ಕೆ ಕಾರಣವಾಗಿದ್ದು ಮಾಜಿ ಬಿಗ್ಬಾಸ್ ವಿನ್ನರ್ ಶಶಿ ಅವರಿಗಾಗಿ. ಶಶಿ ನಟಿಸಿರುವ ‘ಮೆಹಬೂಬ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಈ ಸಿನಿಮಾ ರಕ್ಷಕ್ರ ತಂದೆ ಬುಲೆಟ್ ಪ್ರಕಾಶ್ ನಟನೆಯ ಕೊನೆಯ ಸಿನಿಮಾ ಸಹ ಹೌದಂತೆ. ತಮ್ಮ ತಂದೆಯ ಕೊನೆಯ ಸಿನಿಮಾ ಬಗ್ಗೆ ರಕ್ಷಕ್ ಮಾತನಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos