ಮೊಬೈಲ್​ ರಿಂಗ್​ ಆಗಿದ್ದಕ್ಕೂ ಹಣ ಕೊಡಬೇಕು ಅಂದ್ರೆ ಹೇಗೆ? ರಕ್ಷಿತ್ ಶೆಟ್ಟಿ ಗರಂ

Updated on: Aug 02, 2024 | 5:31 PM

‘ಬ್ಯಾಚುಲರ್​ ಪಾರ್ಟಿ’ ಸಿನಿಮಾದಲ್ಲಿ ಬಳಕೆಯಾದ ಹಾಡಿನ ಬಗ್ಗೆ ತಕರಾರು ಎದುರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರಕ್ಷಿತ್​ ಶೆಟ್ಟಿ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಸಿನಿಮಾದಲ್ಲಿ ಹಾಡುಗಳ ಬಳಕೆ ಯಾವ ರೀತಿ ಆಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಎಲ್ಲದಕ್ಕೂ ಕಾಪಿ ರೈಟ್​ ಅನ್ವಯ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ನಟ ರಕ್ಷಿತ್​ ಶೆಟ್ಟಿ ಅವರು ನಿರ್ಮಾಣ ಮಾಡಿದ ‘ಬ್ಯಾಚುಲರ್​ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡು ಅನುಮತಿ ಇಲ್ಲದೇ ಬಳಕೆ ಆಗಿದೆ ಎಂಬ ಕಾರಣದಿಂದ ಅವರ ಮೇಲೆ ಕಾಪಿರೈಟ್​ ಉಲ್ಲಂಘನೆ ಆರೋಪ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು (ಆಗಸ್ಟ್​ 2) ರಕ್ಷಿತ್​ ಶೆಟ್ಟಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಅವರು ಗರಂ ಆಗಿ ಮಾತನಾಡಿದ್ದಾರೆ. ‘ಕಾಪಿ ರೈಟ್​ ಅಂದ್ರೆ ಏನು ಎಂಬುದು ನಮಗೂ ಗೊತ್ತಾಗಬೇಕು. ಹಾಗಾಗಿ ನಾವು ನ್ಯಾಯಾಲಯದಲ್ಲಿ ಫೈಟ್​ ಮಾಡುತ್ತಿದ್ದೇವೆ. ಸಿನಿಮಾದಲ್ಲಿ 3 ಸೆಕೆಂಡ್​ ಮೊಬೈಲ್​ ರಿಂಗ್​ ಆದರೂ ರಾಯಲ್ಟಿ ನೀಡಬೇಕು ಅಂದರೆ ಯಾವು ಯಾಕೆ ಹಣ ನೀಡಬೇಕು’ ಎಂದು ರಕ್ಷಿತ್​ ಶೆಟ್ಟಿ ಪ್ರಶ್ನಿಸಿದ್ದಾರೆ. ಎಂಆರ್​ಟಿ ಮ್ಯೂಸಿಕ್​ ಹಾಕಿದ ಕೇಸ್​ ವಿಚಾರದಲ್ಲಿ ರಕ್ಷಿತ್​ ಶೆಟ್ಟಿ ಈ ರೀತಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More