‘ಬ್ಯಾಚುಲರ್ ಪಾರ್ಟಿ’ಗೆ ಯೋಗಿಯೇ ಬೇಕೆಂದು ರಕ್ಷಿತ್ ಹಠ ಮಾಡಿದ್ದು ಯಾಕೆ?

‘ಬ್ಯಾಚುಲರ್ ಪಾರ್ಟಿ’ಗೆ ಯೋಗಿಯೇ ಬೇಕೆಂದು ರಕ್ಷಿತ್ ಹಠ ಮಾಡಿದ್ದು ಯಾಕೆ?

ಮಂಜುನಾಥ ಸಿ.
|

Updated on: Jan 16, 2024 | 10:04 PM

Yogi-Rakshit Shetty: ತಮ್ಮ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾಕ್ಕೆ ಯೋಗಿಯೇ ಬೇಕೆಂದು ಹಠ ಹಿಡಿದಿದ್ದು ಏಕೆಂದು ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.

ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣ ಮಾಡಿ, ಯೋಗಿ ಹಾಗೂ ದಿಗಂತ್ ಒಟ್ಟಿಗೆ ನಟಿಸಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ರಕ್ಷಿತ್ ಶೆಟ್ಟಿ, ನನಗೆ ಯೋಗಿ ಹೊಸ ಪರಿಚಯ. ಆದರೆ ಬಹುಬೇಗ ನಾವು ಗೆಳೆಯರಾದೆವು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅವರನ್ನು ಹಾಕಿಕೊಳ್ಳೋಣ ಎಂದು ನಾನೇ ನಿರ್ದೇಶಕರಿಗೆ ಪದೇ ಪದೇ ಸೂಚಿಸಿದೆ. ‘ಹುಡುಗರು’ ಸಿನಿಮಾದಲ್ಲಿನ ಅವರ ನಟನೆ ಅದ್ಭುತವಾದುದು, ಆ ಸಿನಿಮಾದಲ್ಲಿ ಅವರ ನಟನೆ ನೋಡಿ ನನಗೆ ಶಾಕ್ ಆಗಿತ್ತು. ಅದ್ಭುತವಾಗಿ ನಟಿಸಿದ್ದಾರೆ. ಅದಕ್ಕೆ ಅವರೇ ಇರಲೆಂದು ನಾನು ಹಠ ಹಿಡಿದಿದ್ದೆ ಎಂದರು. ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ