ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್

Updated on: Jun 13, 2026 | 11:38 AM

ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಾರ್ಢ್ಯ ಹಾಗೂ ಫಿಟ್‌ನೆಸ್‌ನಿಂದಲೇ ಗಮನ ಸೆಳೆಯುವ ಕೆವಿನ್, ಜಿಮ್‌ನಲ್ಲಿ ನಡೆಸಿರುವ ವರ್ಕೌಟ್ ವಿಡಿಯೋ ಒಂದು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಟಾಲಿವುಡ್ ಮೆಗಾಸ್ಟಾರ್ ರಾಮ್ ಚರಣ್ ಎಲ್ಲೇ ಹೋದರೂ ಅವರ ನೆರಳಿನಂತೆ ರಕ್ಷಣೆ ನೀಡುವ ಬಾಡಿಗಾರ್ಡ್ ಕೆವಿನ್ ಕುಂಟ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ತಮ್ಮ ಕಟ್ಟುಮಸ್ತಾದ ದೇಹದಿಂದಲೇ ಗಮನ ಸೆಳೆಯುತ್ತಾ ಇದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆವಿನ್ ಕುಂಟ ಅವರು ತಮ್ಮ ತರಬೇತುದಾರರ ಸಮ್ಮುಖದಲ್ಲಿ ತೀವ್ರ ಹಂತದ ಬಾಕ್ಸಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಪಂಚ್ ಪ್ಯಾಡ್‌ಗಳಿಗೆ ಅವರು ಸತತವಾಗಿ ಆಕ್ರಮಣಕಾರಿ ಪಂಚ್‌ಗಳನ್ನು ನೀಡುತ್ತಾ ತಮ್ಮ ವೇಗ ಮತ್ತು ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಎಕ್ಸಸೈಸ್ ಮಾಡುವ ಮೂಲಕ ತಮ್ಮ ಅದ್ಭುತ ಫಿಟ್‌ನೆಸ್ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ.

ವಿಡಿಯೋದ ಕೊನೆಯ ಭಾಗದಲ್ಲಿ ಕೆವಿನ್ ಅವರು ಜಿಮ್‌ನ ಮೇಲ್ಭಾಗದಲ್ಲಿರುವ ಮಂಕಿ ಬಾರ್ಸ್ ಸಹಾಯದಿಂದ ಅತ್ಯಂತ ಸುಲಭವಾಗಿ ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸುವ ಸಾಹಸ ಮಾಡಿದ್ದಾರೆ. ಅವರ ಈ ಸಿಕ್ಸ್ ಪ್ಯಾಕ್ ಬಾಡಿ ಮತ್ತು ಕಠಿಣ ಪರಿಶ್ರಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More