ಈಗ ಸ್ವಲ್ಪ ಕನ್ನಡ ಬರುತ್ತೆ, ಮುಂದಿನ ಸಲ ಜಾಸ್ತಿ ಮಾತಾಡುವೆ: ರಾಮ್ ಚರಣ್
ರಾಮ್ ಚರಣ್ ಬೆಂಗಳೂರಿಗೆ ಬಂದು ‘ಪೆದ್ದಿ’ ಚಿತ್ರದ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇದಿಕೆಯಲ್ಲಿ ಅವರಿಗೆ ಶಿವರಾಜ್ಕುಮಾರ್ ಕೂಡ ಸಾಥ್ ನೀಡಿದರು. ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಹಾಗೂ ರಾಮ್ ಚರಣ್ ತೆರೆ ಹಂಚಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕನ್ನಡ, ತೆಲುಗು, ಇಂಗ್ಲಿಷ್ ಮಿಶ್ರಿತವಾಗಿ ರಾಮ್ ಚರಣ್ ಮಾತಾಡಿದರು.
ನಟ ರಾಮ್ ಚರಣ್ ಅವರು ಬೆಂಗಳೂರಿಗೆ ಬಂದು ‘ಪೆದ್ದಿ’ (Peddi) ಸಿನಿಮಾದ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇದಿಕೆಯಲ್ಲಿ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shiva Rajkumar) ಸಾಥ್ ನೀಡಿದರು. ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಮತ್ತು ರಾಮ್ ಚರಣ್ ಅವರು ತೆರೆ ಹಂಚಿಕೊಂಡಿದ್ದಾರೆ. ಚಿತ್ರತಂಡದ ಜೊತೆಗೆ ನೆರೆದಿದ್ದ ಅನೇಕ ಅಭಿಮಾನಿಗಳನ್ನು ಉದ್ದೇಶಿಸಿ ರಾಮ್ ಚರಣ್ ಅವರು ಮಾತನಾಡಿದರು. ಕನ್ನಡ, ತೆಲುಗು, ಇಂಗ್ಲಿಷ್ ಮಿಶ್ರಿತವಾಗಿ ಅವರು ಮಾತಾಡಿದರು. ‘ಈಗ ನನಗೆ ಸ್ವಲ್ಪ ಕನ್ನಡ ಬರುತ್ತದೆ. ಮುಂದಿನ ಭೇಟಿ ವೇಳೆಗೆ ಕನ್ನಡ ಕಲಿತುಕೊಳ್ಳುತ್ತೇನೆ. ಮುಂದಿನ ಬಾರಿ ಜಾಸ್ತಿ ಕನ್ನಡ ಮಾತಾಡುತ್ತೇನೆ’ ಎಂದು ರಾಮ್ ಚರಣ್ (Ram Charan) ಅವರು ಹೇಳಿದರು. ಈ ಸಿನಿಮಾವನ್ನು ಬಹಳ ಕಷ್ಟಪಟ್ಟು ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಜೂನ್ 4ರಂದು ‘ಪೆದ್ದಿ’ ಸಿನಿಮಾ ರಿಲೀಸ್ ಆಗಲಿದೆ. ಜಾನ್ವಿ ಕಪೂರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ
ಕೊಯಮತ್ತೂರು ಬಾಲಕಿ ಹತ್ಯೆ ಕುರಿತ ಸುದ್ದಿಗೋಷ್ಠಿಯಲ್ಲಿ ನಕ್ಕ ಮಹಿಳಾ ಪೊಲೀಸ್!
SIR ಸಭೆಗೆ ಗೈರಾದ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಿಗೆ ‘ಕೈ’ ಕೊಕ್
ಶಿವಮೊಗ್ಗ KSCA ಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ್ ಅಂತಿಮ ದರ್ಶನ


