ವಿಡಿಯೋ ನೋಡಿ: ಜೈ ಶ್ರೀರಾಂ ಘೋಷಣೆ ಮಧ್ಯೆ ಅಯೋಧ್ಯೆಗೆ ರಾಮ ಲಲ್ಲಾ ಮೂರ್ತಿ

| Updated By: Ganapathi Sharma

Updated on: Jan 18, 2024 | 7:29 AM

ಸುಮಾರು ಒಂದು ನಿಮಿಷದ ವೀಡಿಯೊದಲ್ಲಿ, ಜೈ ಶ್ರೀ ರಾಮ್, ಜೈ ಸಿಯಾ ರಾಮ್ ಮತ್ತು ಜೈ ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಟ್ರಕ್ ಅಯೋಧ್ಯೆಯ ರಾಮ ಮಂದಿರವನ್ನು ಪ್ರವೇಶಿಸುವುದನ್ನು ಕಾಣಬಹುದು. ರಾಮ ಲಲ್ಲಾ ಮೂರ್ತಿಯನ್ನು ಹೊತ್ತ ಟ್ರಕ್ ಅನ್ನು ಕಮಾಂಡೋಗಳು ಮತ್ತು ಇತರ ಪೊಲೀಸ್ ಸಿಬ್ಬಂದಿ ಸುತ್ತುವರೆದಿದ್ದರು.

ಅಯೋಧ್ಯೆ, ಜನವರಿ 18: ‘ಜೈ ಶ್ರೀ ರಾಮ್’ ಘೋಷಣೆಗಳ ಮಧ್ಯೆ ಹೆಚ್ಚಿನ ಭದ್ರತೆಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ (Ayodhya Ram Mandir) ತರಲಾಯಿತು. ಜನವರಿ 22 ರಂದು ನಡೆಯಲಿರುವ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕಿಂತ ಐದು ದಿನಗಳ ಮೊದಲು ನಡೆದ ಈ ಮಹತ್ವದ ವಿದ್ಯಮಾನಕ್ಕೆ ನೂರಾರು ಮಂದಿ ಸಾಕ್ಷಿಯಾದರು. ಈ ಮೇಲಿನ ಸುಮಾರು ಒಂದು ನಿಮಿಷದ ವೀಡಿಯೊದಲ್ಲಿ, ಜೈ ಶ್ರೀ ರಾಮ್, ಜೈ ಸಿಯಾ ರಾಮ್ ಮತ್ತು ಜೈ ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಟ್ರಕ್ ಅಯೋಧ್ಯೆಯ ರಾಮ ಮಂದಿರವನ್ನು ಪ್ರವೇಶಿಸುವುದನ್ನು ಕಾಣಬಹುದು. ರಾಮ ಲಲ್ಲಾ ಮೂರ್ತಿಯನ್ನು ಹೊತ್ತ ಟ್ರಕ್ ಅನ್ನು ಕಮಾಂಡೋಗಳು ಮತ್ತು ಇತರ ಪೊಲೀಸ್ ಸಿಬ್ಬಂದಿ ಸುತ್ತುವರೆದಿದ್ದರು.

ಇದಕ್ಕೂ ಮುನ್ನ ರಾಮ ಲಲ್ಲಾನ ಮೂರ್ತಿಗೆ “ಪರಿಸರ ಪ್ರವೇಶ” ಮತ್ತು “ಕಲಶ ಪೂಜೆ” ನಡೆಸಲಾಯಿತು. ಅಲ್ಲದೆ, ರಾಮ ಲಲ್ಲಾ ಮೂರ್ತಿಯನ್ನು ದೇವಾಲಯದ ಆವರಣಕ್ಕೆ ಕೊಂಡೊಯ್ಯಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಇತರರೊಂದಿಗೆ ಸರಯೂ ನದಿಯ ದಡದಲ್ಲಿ ಕಲಶ ಪೂಜೆ ನಡೆಸಿದರು.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಈಗಲೇ ಏಕೆ? ಕಾರಣ ಕೊಟ್ಟ ಪೇಜಾವರ ಶ್ರೀ

5 ವರ್ಷದ ಮಗುವಿನ ರಾಮನ ವಿಗ್ರಹವನ್ನು ಮೈಸೂರಿನ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ್ದಾರೆ. ರಾಮ ಲಲ್ಲಾನ ವಿಗ್ರಹವು 4 ಅಡಿ 3 ಇಂಚು ಎತ್ತರ ಮತ್ತು 150-200 ಕೆಜಿ ತೂಕವಿದೆ. ಮೂರು ಅಂತಸ್ತಿನ ದೇವಾಲಯದ ನೆಲ ಮಹಡಿಯಲ್ಲಿ ರಾಮ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾದರೆ, ಮೊದಲ ಮಹಡಿಯಲ್ಲಿ ಸೀತೆ, ಹನುಮಾನ್ ಮತ್ತು ರಾಮನ ಸಹೋದರರ ವಿಗ್ರಹಗಳನ್ನು ಇರಿಸಲಾಗುತ್ತದೆ.

ಇದನ್ನೂ ಓದಿ: ಅಯೋಧ್ಯೆಗೆ ರಾಮ ಲಲ್ಲಾ ಮೂರ್ತಿ ಆಗಮನ, ರಾಮ ಹೇಗಿದ್ದಾನೆ ಎಂದು ಚಿತ್ರಗಳಲ್ಲಿ ನೋಡಿ

ಜನವರಿ 22ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 18, 2024 07:28 AM