AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ ಸಿನಿಮಾಗೆ ರೆಡಿ ಆಗಿತ್ತು 32 ವರ್ಷನ್ ಹಾಡು

‘ರಾಮಾಯಣ ಸಿನಿಮಾಗೆ ರೆಡಿ ಆಗಿತ್ತು 32 ವರ್ಷನ್ ಹಾಡು

ರಾಜೇಶ್ ದುಗ್ಗುಮನೆ
|

Updated on:Oct 16, 2026 | 5:12 PM

Share

ಬೆಂಗಳೂರಿನಲ್ಲಿ ನಡೆದ ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಚಿತ್ರದ ಸಂಗೀತದ ಸವಾಲುಗಳನ್ನು ವಿವರಿಸಿದರು. ತಮ್ಮ ತಂಡದ ನಿರಂತರ ಪರಿಶ್ರಮ, ಸಂಗೀತದ 30ಕ್ಕೂ ಹೆಚ್ಚು ಆವೃತ್ತಿಗಳು, ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹ್ಯಾನ್ಸ್ ಝಿಮ್ಮರ್ ಜೊತೆಗಿನ ಸಹಯೋಗದ ಕುರಿತು ಮಾತನಾಡಿದರು.

ಬೆಂಗಳೂರಿನಲ್ಲಿ ನಡೆದ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವು ಬೆಂಗಳೂರಲ್ಲಿ ನಡೆದಿದೆ. ಈ ವೇಳೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಚಿತ್ರದ ಸಂಗೀತ ಸಂಯೋಜನೆಯಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು. ರಾಮಾಯಣ ಚಿತ್ರದ ಸಂಗೀತಕ್ಕಾಗಿ ತಮ್ಮ ತಂಡವು ನಿರಂತರವಾಗಿ ಶ್ರಮಿಸಿದೆ ಎಂದು ಅವರು ವಿವರಿಸಿದರು, ಕೆಲವೊಮ್ಮೆ 18 ರಿಂದ 23 ಗಂಟೆಗಳ ಕಾಲವೂ ಕೆಲಸ ಮಾಡಿದ್ದೇವೆ ಎಂದರು.

ರಾಮಾಯಣ ಸಿನಿಮಾಗೆ 32 ರಿಂದ 34 ಆವೃತ್ತಿಗಳನ್ನು ಸಿದ್ಧಪಡಿಸಿ, ಸೂಕ್ತವಾದದ್ದನ್ನು ಆಯ್ಕೆ ಮಾಡಲಾಗಿದೆ ಎಂದು ರೆಹಮಾನ್ ತಿಳಿಸಿದರು. ಅಲ್ಲದೆ, ಲಾಸ್ ಏಂಜಲೀಸ್, ಲಂಡನ್, ಮುಂಬೈ, ಚೆನ್ನೈ ಸೇರಿದಂತೆ ವಿಶ್ವದ ವಿವಿಧೆಡೆ ಸಂಗೀತ ಕೆಲಸ ನಡೆದಿದೆ. ವಿಶೇಷವಾಗಿ, ಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಝಿಮ್ಮರ್ ಅವರೊಂದಿಗೆ ಈ ಚಿತ್ರಕ್ಕೆ ಸಂಗೀತ ನಿರ್ಮಾಣ ಮಾಡಿರುವುದು ತಮ್ಮ ಪಾಲಿಗೆ ಹೆಮ್ಮೆಯ ವಿಷಯ ಎಂದು ಎ.ಆರ್. ರೆಹಮಾನ್ ಹಂಚಿಕೊಂಡರು. ಈ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿರುವುದಕ್ಕೆ ತಮಗೆ ಅತೀವ ಸಂತೋಷವಿದೆ ಎಂದು ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 16, 2026 04:44 PM

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More