ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಹೊಗೆ , ದೆಹಲಿಯಲ್ಲಿ ಮಹತ್ವದ ಬೆಳವಣಿಗೆ

Updated on: Dec 02, 2025 | 10:50 PM

ಕರ್ನಾಟಕ ಕಾಂಗ್ರೆಸ್​ನಲ್ಲಿ ಜ್ವಾಲಾಮುಖಿ ಸೃಷ್ಟಿಸಿದ್ದ ಕುರ್ಚಿ ಕಾಳಗ ಸದ್ಯಕ್ಕೆ ಶಾಂತವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪರಸ್ಪರ ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋಗಿ ತಿಂಡಿ ತಿಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೀಗಾಗಿ ಕೈ ಬಿಕ್ಕಟ್ಟು ಶಾಂತವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಮತ್ತೆ ಹೊಗೆಯಾಡಲು ಶುರುವಾಗಿದೆ.

ನವದೆಹಲಿ, (ಡಿಸೆಂಬರ್ 02): ಕರ್ನಾಟಕ ಕಾಂಗ್ರೆಸ್​ನಲ್ಲಿ ಜ್ವಾಲಾಮುಖಿ ಸೃಷ್ಟಿಸಿದ್ದ ಕುರ್ಚಿ ಕಾಳಗ ಸದ್ಯಕ್ಕೆ ಶಾಂತವಾಗಿದೆ. ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಪರಸ್ಪರ ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋಗಿ ತಿಂಡಿ ತಿಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೀಗಾಗಿ ಕೈ ಬಿಕ್ಕಟ್ಟು ಶಾಂತವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ (BJP) ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಮತ್ತೆ ಹೊಗೆಯಾಡಲು ಶುರುವಾಗಿದೆ. ಹೌದು…ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ಬಿಜೆಪಿ ರೆಬೆಲ್ಸ್ ಬಣ ಸದ್ದಿಲ್ಲದೇ ದೆಹಲಿಗೆ ಯಾತ್ರೆ ಕೈಗೊಂಡಿದ್ದು, ಅಲ್ಲಿ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿರುವುದು ಅಚ್ಚರಿಗೆ ಕಾರಣವಾಗಿದೆ.

ದೆಹಲಿಯಲ್ಲಿ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರಿಂದ ಹೈಕಮಾಂಡ್ ನಾಯಕರು ಒಟ್ಟಾಗಿ ಸಿಗುತ್ತಾರೆ. ಇದೇ ಸರಿಯಾದ ಟೈಮ್ ಎಂದು ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀಮಂತ ಪಾಟೀಲ್, BV ನಾಯ್ಕ್, ಎನ್.ಆರ್ ಸಂತೋಷ ಸೇರಿದಂತೆ ಹಲವು ನಾಯಕರು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದು, ಹೈಕಮಾಂಡ್ ನಾಯಕರ ಜೊತೆ ಚರ್ಚೆಗೆ ಕಸರತ್ತು ನಡೆಸಿದ್ದಾರೆ.

ಮತ್ತೊಂದು ಬಣ ಅಂದ್ರೆ ಬಿಪಿ ಹರೀಶ್, ಮಾಜಿ ಸಂಸದ ಸಿದ್ದೇಶ್ವರ್ ಕೂಡ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಬೆಲ್ಲದ್ ಕೂಡ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಹೈಕಮಾಂಡ್ ಭೇಟಿಗೆ ಸರ್ವ ಪ್ರಯತ್ನ ಮಾಡ್ತಿದ್ದಾರೆ‌.