ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
‘ರಾಜು ಜೇಮ್ಸ್ ಬಾಂಡ್’ ಸಿನಿಮಾದ ಕಾರ್ಯಕ್ರಮಕ್ಕೆ ಅತಿಥಿಯಾಗಿ ರಮ್ಯಾ ದಿವ್ಯ ಸ್ಪಂದನಾ ಅವರು ಆಗಮಿಸಿದ್ದಾರೆ. ಈ ವೇಳೆ ಅವರ ಕೈಯಲ್ಲಿದ್ದ ಉಂಗುರ ಹೈಲೈಟ್ ಆಗಿದೆ. ಈ ಕುರಿತು ಎದುರಾದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳು ಬರಬೇಕು ಎಂದು ಕೂಡ ರಮ್ಯಾ ಅವರು ಹೇಳಿದ್ದಾರೆ.
ನಟಿ ರಮ್ಯಾ ಅವರ ಬೆರಳಲ್ಲಿ ಇರುವ ಉಂಗುರ ಗಮನ ಸೆಳೆದಿದೆ. ಇದರಿಂದ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದರ ಬಗ್ಗೆ ಸ್ವತಃ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ರಕ್ಷಿತಾ ಜೊತೆ ನೀವು ಮಾತನಾಡಿದ್ದು ಏನು ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ‘ರಕ್ಷಿತಾ ಮತ್ತು ನನ್ನ ನಡುವಿನ ಮಾತುಕಥೆಯನ್ನು ನಾನು ಸಾರ್ವಜನಿಕವಾಗಿ ಯಾಕೆ ಹೇಳಬೇಕು? ಅದನ್ನು ನಾನು ನಿಮಗೆ ಹೇಳಿದರೆ ಸೀಕ್ರೆಟ್ ಆಗಿರಲ್ಲ. ಅದು ಸಾರ್ವಜನಿಕ ಮಾಹಿತಿ ಆಗುತ್ತದೆ. ಅದು ಸೀಕ್ರೆಟ್ ಆಗಿಯೇ ಇರಲಿ’ ಎಂದು ರಮ್ಯಾ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.