‘ಆಶಾ ಕಾರ್ಯಕರ್ತೆಯರು ಕೇಳುವುದರಲ್ಲಿ ಏನೂ ತಪ್ಪಿಲ್ಲ’: ಹೋರಾಟದಲ್ಲಿ ಭಾಗಿಯಾದ ರಮ್ಯಾ

Edited By:

Updated on: Nov 24, 2026 | 8:16 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ, ಮಾಜಿ ಸಂಸದೆ ರಮ್ಯಾ ಅವರು ಬೆಂಬಲ ನೀಡಿದ್ದಾರೆ. ಫ್ರೀಡಂ ಪಾರ್ಕ್​ಗೆ ಬಂದು ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸರ್ಕಾರ ಖಂಡಿತಾ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದರು.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಟಿ, ಮಾಜಿ ಸಂಸದೆ ರಮ್ಯಾ ಅವರು ಬೆಂಬಲ ನೀಡಿದ್ದಾರೆ. ಫ್ರೀಡಂ ಪಾರ್ಕ್​ಗೆ ಬಂದು ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸರ್ಕಾರ ಖಂಡಿತಾ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದರು. ‘ನಿಮ್ಮನ್ನು ನೋಡಿ ಸಂಕಟ ಆಗುತ್ತಿದೆ. ಮಳೆ, ಚಳಿ, ಬಿಸಿಲು ಏನೇ ಇರಲಿ ನೀವೆಲ್ಲ ಇಲ್ಲಿ ಇದ್ದೀರಿ. ಇದು ಹೆಣ್ಣು ಮಕ್ಕಳಲ್ಲಿ ಇರುವ ಶಕ್ತಿ. ಆದರೂ ನನಗೆ ಬೇಸರ ಆಗುತ್ತಿದೆ. ನೀವು ಕೇಳುತ್ತಿರುವುದರಲ್ಲಿ ಏನೂ ತಪ್ಪು ಇಲ್ಲ. ಕಳೆದ ವಾರ ನಾನು ಯುಟಿ ಖಾದರ್ ಅವರನ್ನು ಭೇಟಿ ಮಾಡಿದ್ದೆ. ಆಶಾ ಕಾರ್ಯಕರ್ತೆಯರೇ ನಮ್ಮ ಸಾರ್ವಜನಿಕ ಆರೋಗ್ಯದ ಬೆನ್ನೆಲುಬು ಅಂತ ಅವರು ಹೇಳಿದರು. ನನಗೆ ತುಂಬಾ ನಂಬಿಕೆ ಇದೆ. ನಮ್ಮ ಸರ್ಕಾರ ಖಂಡಿತಾ ನಿಮ್ಮ ಬೇಡಿಕೆಯನ್ನು ಪೂರೈಸುತ್ತದೆ. ನೀವು ಇಲ್ಲದೇ ಏನೂ ಆಗಲ್ಲ. ನನ್ನ ಕೈಯಲ್ಲಿ ಆದಷ್ಟು ಪ್ರಯತ್ನ ಮಾಡುತ್ತೇನೆ’ ಎಂದು ರಮ್ಯಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More