ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ಆದಾಗಿನಿಂದಲೂ ನಟಿ ರಮ್ಯಾ, ರೇಣುಕಾ ಸ್ವಾಮಿ ಕುಟುಂಬದ ಪರವಾಗಿ ನಿಂತಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರು ದರ್ಶನ್ ಹಾಗೂ ಅವರ ತಂಡ ಮಾಡಿರುವ ಕಾರ್ಯಗಳನ್ನು ಟೀಕೆ ಮಾಡಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಇದರಿಂದಾಗಿ ದರ್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಕಿಳು ನಿಂದನೆ, ಟ್ರೋಲಿಂಗ್ ಅನ್ನು ಸಹ ಮಾಡಿದ್ದಾರೆ. ಅದೆಲ್ಲ ಏನೇ ಇದ್ದರೂ, ಸಿನಿಮಾ ವಿಷಯಕ್ಕೆ ಬಂದಾಗ ರಮ್ಯಾ ತಮ್ಮ ವಿಶಾಲ ಹೃದಯ ಪ್ರದರ್ಶಿಸಿದ್ದು, ಬಿಡುಗಡೆ ಆಗುತ್ತಿರುವ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ