ಡಿಕೆ ಶಿವಕುಮಾರ್​ಗೆ ರಮ್ಯಾ ಪ್ರೀತಿಯ ಅಪ್ಪುಗೆ: ವಿಡಿಯೋ ನೋಡಿ

Updated on: Aug 18, 2025 | 12:11 PM

ಹೆಬ್ಬಾಳ ವಿಸ್ತರಿತ ಫ್ಲೈಓವರ್ ಉದ್ಘಾಟನೆ ಕಾರ್ಯಕ್ರಮದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ನಟಿ ರಮ್ಯಾ ಆತ್ಮೀಯ ಕುಶಲೋಪರಿ ಸ್ಥಳದಲ್ಲಿದ್ದವರ ಗಮನ ಸೆಳೆಯಿತು. ಡಿಕೆ ಶಿವಕುಮಾರ್​​ಗೆ ರಮ್ಯಾ ಪ್ರೀತಿಯ ಅಪ್ಪುಗೆ ನೀಡಿದರೆ, ಡಿಸಿಎಂ ನಟಿಯ ತಲೆಮುಟ್ಟಿ ಆಶೀರ್ವದಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಆಗಸ್ಟ್ 18: ಬೆಂಗಳೂರಿನ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಲೋಕಾರ್ಪಣೆ ಮಾಡಿದರು. ಇದೇ ವೇಳೆ ನಟಿ ರಮ್ಯಾ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ ಎದುರಿಗೆ ಸಿಕ್ಕ ನಟಿ ರಮ್ಯಾ ಬಳಿ ಡಿಕೆ ಶಿವಕುಮಾರ್, ‘ಹಲೋ, ಹೌ ಆರ್ ಯೂ’ ಎಂದಿದ್ದಾರೆ. ಇದೇ ವೇಳೆ ರಮ್ಯಾ ಡಿಸಿಎಂ ಅವರನ್ನು ಪ್ರೀತಿಯಿಂದ ತಬ್ಬಿಕೊಂಡರು. ಬಳಿಕ ಡಿಕೆ ಶಿವಕುಮಾರ್, ರಮ್ಯಾ ತಲೆ ಮುಟ್ಟಿ ಆಶೀರ್ವದಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ