Ranveer Singh: ಸೈಮಾದಲ್ಲಿ ರಣವೀರ್ ಸಿಂಗ್ ಝಗಮಗ ಡ್ಯಾನ್ಸ್; ಹೇಗಿತ್ತು ನೋಡಿ ಜೋಶ್
SIIMA Awards 2022: ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ವೇಳೆ ನಟ ರಣವೀರ್ ಸಿಂಗ್ ಅವರು ಸಖತ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ನಟ ರಣವೀರ್ ಸಿಂಗ್ (Ranveer Singh) ಅವರದ್ದು ಕಲರ್ಫುಲ್ ವ್ಯಕ್ತಿತ್ವ. ಯಾವಾಗಲೂ ಅವರು ಜೋಶ್ನಲ್ಲಿಯೇ ಇರುತ್ತಾರೆ. ಸಿನಿಮಾ ಸೋತರೂ ಅವರು ಕುಗ್ಗುವುದಿಲ್ಲ. ಬೆಂಗಳೂರಿನಲ್ಲಿ ನಡೆದ ‘ಸೈಮಾ’ ಅವಾರ್ಡ್ಸ್ (SIIMA Awards 2022) ಕಾರ್ಯಕ್ರಮಕ್ಕೆ ಅವರು ಹಾಜರಿ ಹಾಕಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವಾಗ ಅವರು ಸಖತ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡರು. ನಿಂತಲ್ಲೇ ಡ್ಯಾನ್ಸ್ ಮಾಡಿ ವಾತಾವರಣದ ರಂಗು ಹೆಚ್ಚಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಅನೇಕ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಸದ್ಯ ರಣವೀರ್ ಸಿಂಗ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.