ಕರಡಿ ಬೆನ್ನಟ್ಟಿದ ಹುಲಿರಾಯ: ನಲ್ಲಮಲ ಅರಣ್ಯದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಂಡ ಸಫಾರಿಗರು
ನಾಗರ್ ಕರ್ನೂಲ್‌ನ ನಲ್ಲಮಲ ಅರಣ್ಯದಲ್ಲಿ ಹುಲಿ ಹಾಗೂ ಕರಡಿ ಮುಖಾಮುಖಿಯಾಗಿ, ಹುಲಿ ಕರಡಿಯನ್ನು ಬೆನ್ನಟ್ಟಿದ ರೋಚಕ ದೃಶ್ಯವನ್ನು ಸಫಾರಿಗೆ ಬಂದಿದ್ದ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಹುಲಿ ಬೆನ್ನಟ್ಟುತ್ತಿದ್ದಂತೆ ಕರಡಿ ಕೂಗುತ್ತಾ ಓಡಿಹೋಗಿದ್ದು, ಹುಲಿಯ ಘರ್ಜನೆಯಿಂದ ಇಡೀ ಅರಣ್ಯ ಪ್ರತಿಧ್ವನಿಸಿದೆ. ಸಾಮಾನ್ಯವಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವ ಈ ಎರಡು ವನ್ಯಜೀವಿಗಳು ಒಂದೇ ಸ್ಥಳದಲ್ಲಿ ಮುಖಾಮುಖಿಯಾಗಿದ್ದು ಪ್ರವಾಸಿಗರಿಗೆ ಅಪರೂಪದ ಅನುಭವ ನೀಡಿದೆ.
ನಾಗರ್ ಕರ್ನೂಲ್ ಜಿಲ್ಲೆಯ ಅಮ್ರಾಬಾದ್ ಮಂಡಲ ವ್ಯಾಪ್ತಿಯ ನಲ್ಲಮಲ ಅರಣ್ಯದಲ್ಲಿ ವನ್ಯಜೀವಿಗಳ ನಡುವೆ ನಡೆದ ಆಸಕ್ತಿದಾಯಕ ಘಟನೆಯೊಂದು ಪ್ರವಾಸಿಗರಲ್ಲಿ ಕುತೂಹಲ ಹಾಗೂ ರೋಮಾಂಚನ ಮೂಡಿಸಿದೆ. ಹುಲಿಯೊಂದು ಕರಡಿಯನ್ನು ಬೆನ್ನಟ್ಟಿದ ಪರಿಣಾಮ ಅರಣ್ಯದಲ್ಲಿ ಕೆಲಕಾಲ ರೋಚಕ ವಾತಾವರಣ ನಿರ್ಮಾಣವಾಗಿತ್ತು. ಈ ಅಪರೂಪದ ದೃಶ್ಯವನ್ನು ಸಫಾರಿಗರು ಕಣ್ತುಂಬಿಕೊಂಡರು. ಹುಲಿ ಬೆನ್ನಟ್ಟುತ್ತಿದ್ದಂತೆ ಕರಡಿ ಕೂಗುತ್ತಾ ಓಡಿಹೋಗಿದ್ದು, ಹುಲಿಯ ಘರ್ಜನೆಯಿಂದ ಇಡೀ ಅರಣ್ಯ ಪ್ರತಿಧ್ವನಿಸಿದೆ. ಸಾಮಾನ್ಯವಾಗಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವ ಈ ಎರಡು ವನ್ಯಜೀವಿಗಳು ಒಂದೇ ಸ್ಥಳದಲ್ಲಿ ಮುಖಾಮುಖಿಯಾಗಿದ್ದು ಪ್ರವಾಸಿಗರಿಗೆ ಅಪರೂಪದ ಅನುಭವ ನೀಡಿದೆ. ಕೆಲವರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 11, 2026 05:18 PM
Loading...
Unable to load recommendations.
Follow Us