‘ಮೆಗಾ ಸ್ಟಾರ್’​ ಚಿರಂಜೀವಿ ಮತ್ತು ರವಿಚಂದ್ರನ್​ ನಡುವಿನ ಸ್ನೇಹ ವಿವರಿಸಲು ಈ ಒಂದು ಘಟನೆ ಸಾಕು

Edited By:

Updated on: Sep 18, 2021 | 10:04 AM

ರವಿಚಂದ್ರನ್​ ನಟನೆಯ ‘ಸಿಪಾಯಿ’ ಸಿನಿಮಾದಲ್ಲಿ ಮೆಗಾ ಸ್ಟಾರ್​ ಚಿರಂಜೀವಿ ಒಂದು ಅತಿಥಿ ಪಾತ್ರ ಮಾಡಿದ್ದರು. ಆ ಸಂದರ್ಭದ ಒಂದು ಘಟನೆಯನ್ನು ‘ಕ್ರೇಜಿ ಸ್ಟಾರ್​’ ಮೆಲುಕು ಹಾಕಿದ್ದಾರೆ.

ನಟ ರವಿಚಂದ್ರನ್​ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಜನ ಸ್ನೇಹಿತರು ಇದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಮಂದಿ ಕೂಡ ‘ಕ್ರೇಜಿ ಸ್ಟಾರ್​’ ಬಗ್ಗೆ ಗೌರವ ಹೊಂದಿದ್ದಾರೆ. ಟಾಲಿವುಡ್​ನ ಮೆಗಾ ಸ್ಟಾರ್​ ಚಿರಂಜೀವಿ ಜೊತೆಗೆ ರವಿಚಂದ್ರನ್ ಸ್ನೇಹ ಸಂಪಾದಿಸಿದ್ದಾರೆ. ಈ ಸ್ಟಾರ್​ ನಟರಿಬ್ಬರು ‘ಸಿಪಾಯಿ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಷ್ಟಕ್ಕೂ ಆ ಸಿನಿಮಾದಲ್ಲಿ ನಟಿಸಲು ಚಿರಂಜೀವಿ ಒಪ್ಪಿಕೊಂಡಿದ್ದು ಹೇಗೆ ಎಂಬುದನ್ನು ರವಿಚಂದ್ರನ್​ ಅವರು ವಿವರಿಸಿದ್ದಾರೆ. ಟಿವಿ9 ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

‘ಚಿರಂಜೀವಿ ಅವರಿಗೆ ಫೋನ್​ ಮಾಡಿ ಕೇಳಿಕೊಂಡೆ. ಒಂದೇ ಮಾತಿಗೆ ಅವರು ಒಪ್ಪಿಕೊಂಡರು. ಅತಿಥಿ ಪಾತ್ರ ಎಂದರೆ ಚಿಕ್ಕದು ಅಂತ ಅವರು ಭಾವಿಸಿದ್ದರು. ನನಗೆ 12 ದಿನ ಕಾಲ್​ಶೀಟ್​ ಬೇಕು ಎಂದೆ. ಯಾಕೆ ಅಂತ ಕೇಳಿದರು. ಪಾತ್ರ ಮತ್ತು ಕಥೆ ವಿವರಿಸಿದ ಮೇಲೆ ಒಪ್ಪಿಕೊಂಡರು. ಸಂಭಾವನೆ ಎಷ್ಟು ಎಂದು ವಿಚಾರಿಸಿದಾಗ, ನಿಮಗೋಸ್ಕರ ನಟಿಸುತ್ತಿದ್ದೇನೆ, ನೀವು ಏನು ಕೊಡುತ್ತೀರೋ ಕೊಡಿ ಅಂತ ಹೇಳಿದ್ರು. ಇದಕ್ಕಿಂತ ದೊಡ್ಡ ಮಾತು ಏನು ಬೇಕು? ನಾವು ಸಂಪಾದಿಸಿರುವುದು ಇಷ್ಟೇ’ ಎಂದಿದ್ದಾರೆ ರವಿಚಂದ್ರನ್​.

ಇದನ್ನೂ ಓದಿ:

ಇಷ್ಟು ವರ್ಷಗಳ ಬಳಿಕ ಹೆಸರು ಬದಲಿಸಿಕೊಳ್ಳಲು ರವಿಚಂದ್ರನ್​ ನಿರ್ಧಾರ; ಹೊಸ ಹೆಸರು ಏನು?

ರವಿಚಂದ್ರನ್​ ತಂದೆ ಅಂದು ಮಾಡಿದ್ದ ಸಹಾಯವನ್ನು ಖುಷ್ಬೂ ಇನ್ನೂ ಮರೆತಿಲ್ಲ; ‘ಕ್ರೇಜಿ ಸ್ಟಾರ್’​ ಹೇಳ್ತಾರೆ ಕೇಳಿ..

Published on: Sep 18, 2021 09:58 AM