ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ ಮತ್ತು ರವಿಚಂದ್ರನ್ ಅವರದ್ದು ಎವರ್ಗ್ರೀನ್ ಕಾಂಬಿನೇಷನ್. ಅವರಿಬ್ಬರು ಜೋಡಿಯಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಅವರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಹಂಸಲೇಖ (Hamsalekha) ಮತ್ತು ರವಿಚಂದ್ರನ್ ಅವರದ್ದು ಎವರ್ಗ್ರೀನ್ ಕಾಂಬಿನೇಷನ್. ಅವರಿಬ್ಬರು ಜೋಡಿಯಾಗಿ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಅವರ ನಡುವೆ ಮುನಿಸು ಉಂಟಾಗಿತ್ತು. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ‘ಸೋನೆ ಸೋನೆ’ ಹಾಡು ರಚಿಸುವಾಗ ಹಂಸಲೇಖ ಮತ್ತು ರವಿಚಂದ್ರನ್ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಂದರ್ಭವನ್ನು ರವಿಚಂದ್ರನ್ (Ravichandran) ಅವರು ಈಗ ವಿವರಿಸಿದ್ದಾರೆ. ‘ಆಗಲೇ ನನ್ನ ಮತ್ತು ಇವರ ನಡುವೆ ಚಿಕ್ಕ ಬೆಂಕಿ ಶುರುವಾಗಿತ್ತು. ಹಾಡಿಗೆ ಹಂಸಲೇಖ ಅವರು 40 ಪಲ್ಲವಿ ಬರೆದರು. ನಾನು ಎಲ್ಲವನ್ನೂ ತಿರಸ್ಕರಿಸಿದೆ. ಕೊನೆಗೆ ಮೊದಲು ಬರೆದಿದ್ದನ್ನೆ ಒಪ್ಪಿಕೊಂಡೆ. ನಮ್ಮ ಸ್ನೇಹ ನಮ್ಮ ಕೆಲಸದಲ್ಲಿ ಕಾಣಿಸುತ್ತದೆ’ ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
