ಚೀಫ್ ವಿಪ್ ಆಗಿರುವ ರವಿಕುಮಾರ್ ಕಲಬುರಗಿ ಡಿಸಿಯನ್ನು ಪಾಕಿಸ್ತಾನದವರು ಅನ್ನುತ್ತಾರೆ: ಸಿದ್ದರಾಮಯ್ಯ

Updated on: May 27, 2025 | 3:24 PM

ಬಿಜೆಪಿ ನಾಯಕರ ವಿರುದ್ಧ ದೂರುಗಳು ದಾಖಲಾದಾಗ ಪಕ್ಷದ ಮುಖಂಡರು ಮತ್ತು ಆರೆಸ್ಸೆಸ್ ನಾಯಕರು ಸಿಕ್ಕಿ ಬೀಳಲ್ಲ, ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳು ಮತ್ತು ದಲಿತ ನಾಯಕರು ಮಾತ್ರ ಸಿಕ್ಹಾಕಿಕೊಳ್ಳುತ್ತಾರೆ, ನಂತರ ಪಕ್ಷದ ಪ್ರಮುಖ ನಾಯಕರು ಹೋಗಿ ಅವರನ್ನು ಬಿಡಿಸಿಕೊಂಡು ಬರುತ್ತಾರೆ, ಅವರು ಬಹಳ ಬುದ್ಧಿವಂತರು, ಜನ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, ಮೇ 27: ಕೆಪಿಸಿಸಿ ಕಚೇರಿಯಲ್ಲಿ ಪಂಡಿತ ಜವಾಹರಲಾಲ್ ನೆಹರೂ (Pandit Jawaharlal Nehru) ಅವರ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಮೊದಲ ಪ್ರಧಾನಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲಬುರಗಿಯ ಜಿಲ್ಲಾಧಿಕಾರಿ ಫೈಜಿಯ ತರನ್ನುಮ್ ಅವರ ವಿಷಯದಲ್ಲಿ ಬಿಜೆಪಿ ನಾಯಕ ಎನ್ ರವಿಕುಮಾರ್ ಹಗುರವಾಗಿ ಮಾತಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡರು. ಎಂಎಲ್​ಸಿ ಮತ್ತು ಮೇಲ್ಮನೆಯಲ್ಲಿ ಚೀಫ್ ವಿಪ್ ಆಗಿರುವ ರವಿಕುಮಾರ್, ಡಿಸಿ ಫೌಜಿಯ ಪಾಕಿಸ್ತಾನದಿಂದ ಬಂದಿರಬೇಕು, ಈ ಮಾತಿಗೆ ಜನರೆಲ್ಲ ಚಪ್ಪಾಳೆ ಬಾರಿಸೋದು ನೋಡಿದರೆ ಅವರು ಪಾಕಿಸ್ತಾನದಿಂದ ಬಂದಿರೋದು ಖಚಿತವಾಗುತ್ತದೆ ಎನ್ನುತ್ತಾರೆ ಅಂತ ಹೇಳಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ಕೆಲಸವೇ ಅದು, ಜನರಲ್ಲಿ ಗೊಂದಲ ಮೂಡಿಸೋದು, ಅಶಾಂತಿಯನ್ನು ಸೃಷ್ಟಿಸುವುದು ಎಂದರು.

ಇದನ್ನೂ ಓದಿ:  ಸಿಎಂ ಸಿದ್ದರಾಮಯ್ಯರನ್ನು ಮತ್ತೊಮ್ಮೆ ಹಾಡಿ ಹೊಗಳಿದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: May 27, 2025 03:13 PM