ಆರ್ಸಿಬಿ 4ನೇ ಸಲ ಫೈನಲ್ ತಲುಪಿದ ಬಳಿಕ ಎಲ್ಲರ ಬಾಯಲ್ಲಿ ಒಂದೇ ಮಾತು: ಈ ಸಲ ಕಪ್ ನಮ್ದೇ!
ವಿರಾಟ್ ಕೊಹ್ಲಿ ನಿನ್ನೆ ನಡೆದ ಪಂದ್ಯದಲ್ಲಿ ವಿಫಲರಾದರೇನಂತೆ, ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದ್ದಾರೆ ಎಂದು ಅನೇಕ ಕ್ರಿಕೆಟ್ ಪ್ರೇಮಿಗಳು ಹೇಳುತ್ತಾರೆ. ಮೊದಲ ಕ್ವಾಲಿಫೈಯರ್ ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ಫಿಲ್ ಸಾಲ್ಟ್ ಯುವತಿಯರ ಮನಸೂರೆಗೊಂಡಿದ್ದಾರೆ, ಒಬ್ಬ ಯುವತಿ ಉಪ್ಪಿಗಂತ ರುಚಿಯಿಲ್ಲ ಅಂತ ಸಾಲ್ಟ್ ವಿಷಯದಲ್ಲಿ ಹೇಳುತ್ತಾರೆ.
ಬೆಂಗಳೂರು, ಮೇ 30: ಈ ಸಲ ಕಪ್ ನಮ್ದೇ! ನಿನ್ನೆ ನಮ್ಮ ವರದಿಗಾರನೊಂದಿಗೆ ಮಾತಾಡಿದ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ಪದೇಪದೆ ಹೇಳಿದ ಮಾತಿದು. 18 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇತಿಹಾಸದಲ್ಲಿ 4ನೇ ಬಾರಿಗೆ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲದಿರೋದು ಸೋಜಿಗ ಮತ್ತು ಅಷ್ಟೇ ನೋವಿನ ಸಂಗತಿ. ಹಾಗೆ ನೋಡಿದರೆ, ಆರ್ಸಿಬಿ ಕೇವಲ ಕನ್ನಡಿಗರು ಮಾತ್ರ ಅಲ್ಲ, ಬಹುತೇಕ ಭಾರತೀಯರ ಅಚ್ಚುಮೆಚ್ಚಿನ ತಂಡ. ನಿನ್ನೆ ಚಂಡೀಗಢ್ನ ಯಾದವೀಂದ್ರ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿ 8 ವಿಕೆಟ್ಗಳಿಂದ ಸುಲಭವಾಗಿ ಬಗ್ಗುಬಡಿದ ಮೇಲೆ ಆರ್ಸಿಬಿ ಅಭಿಮಾನಿಗಳ ಹರ್ಷ, ಉತ್ಸಾಹ ಮತ್ತು ಸೆಲೆಬ್ರೇಷನ್ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: IPL 2025: ಐಪಿಎಲ್ ಫೈನಲ್ ಆಡುವ ಎರಡು ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 30, 2025 11:04 AM