IPL Auction 2026: 5.2 ಕೋಟಿ ರೂ.ಗೆ ಆರ್ಸಿಬಿ ಸೇರಿದ ಮಂಗೇಶ್ ಯಾದವ್ ಯಾರು?
Mangesh Yadav Joins RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿನಿ ಹರಾಜಿನಲ್ಲಿ ಯುವ ಆಲ್‌ರೌಂಡರ್ ಮಂಗೇಶ್ ಯಾದವ್ ಅವರನ್ನು 5.20 ಕೋಟಿ ರೂ.ಗೆ ಖರೀದಿಸಿದೆ. ಮಧ್ಯಪ್ರದೇಶದ ಈ ಪ್ರತಿಭಾವಂತ ಆಟಗಾರ ಎಡಗೈ ವೇಗದ ಬೌಲಿಂಗ್ ಮತ್ತು ಪರಿಣಾಮಕಾರಿ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ಎಂಪಿ ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆರ್ಸಿಬಿ ತಂಡಕ್ಕೆ ಪ್ರಮುಖ ಸೇರ್ಪಡೆಯಾಗಿದ್ದಾರೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಿನಿ ಹರಾಜಿನಲ್ಲಿ ತನ್ನ ನಾಲ್ಕನೇ ಖರೀದಿಯಾಗಿ ಮಧ್ಯಪ್ರದೇಶದ ಯುವ ಆಲ್‌ರೌಂಡರ್ 23 ವರ್ಷದ ಮಂಗೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೂಲ ಬೆಲೆ 30 ಲಕ್ಷ ರೂಗಳೊಂದಿಗೆ ಹರಾಜಿಗೆ ಬಂದ ಮಂಗೇಶ್ ಅವರ ಖರೀದಿಗೆ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಂಗೇಶ್ ಯಾದವ್ ಅವರನ್ನು 5.20 ಕೋಟಿ ರೂ.ಗೆ ಖರೀದಿಸಿ
ಮಂಗೇಶ್ ಯಾದವ್ ಎಡಗೈ ವೇಗದ ಬೌಲರ್ ಆಗಿದ್ದು ಬ್ಯಾಟಿಂಗ್ ಕೂಡ ಮಾಡಬಲ್ಲರು. ಮಂಗೇಶ್ ಆರ್ಸಿಬಿ ತಂಡದ ನಾಯಕ ರಜತ್ ಪಾಟಿದರ್ ಪ್ರತಿನಿಧಿಸುವ ಮಧ್ಯಪ್ರದೇಶ ತಂಡದ ಪರ ದೇಶಿ ಕ್ರಿಕೆಟ್ ಆಡುತ್ತಾರೆ. ಹೀಗಾಗಿ ನಾಯಕನ ಕೋರಿಕೆಯ ಮೇರೆಗೆ ಆರ್ಸಿಬಿ ಮಂಗೇಶ್ ಅವರನ್ನು ಖರೀದಿಸಿದೆ ಎನ್ನಬಹುದು. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಮಾತ್ರವಲ್ಲದೆ 2025 ರ ಎಂಪಿ ಟಿ20 ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಂಗೇಶ್ 14 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇದಲ್ಲದೆ, ಬುಚಿ ಬಾಬು ಟೂರ್ನಮೆಂಟ್‌ನಲ್ಲಿ ಪಂಜಾಬ್ ವಿರುದ್ಧ ಅವರ 75 ರನ್‌ಗಳ ಇನ್ನಿಂಗ್ಸ್ ಕೂಡ ಆಡಿದ್ದರು. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ಮಂಗೇಶ್ ಬೌಲಿಂಗ್ ಜೊತೆಗೆ ಅಗತ್ಯವಿದ್ದಾಗ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಕೂಡ ಮಾಡುತ್ತಾರೆ.