ವಾಪಸ್ಸಾಗುವಂತೆ ಬಿಜೆಪಿಯಿಂದ ಕರೆ ಬಂದಿದೆ, ನನ್ನ ಅಭಿಪ್ರಾಯವಿನ್ನೂ ತಿಳಿಸಿಲ್ಲ: ಕೆಎಸ್ ಈಶ್ವರಪ್ಪ

|

Updated on: Jul 01, 2024 | 1:00 PM

ಹಿರಿಯ ರಾಜಕಾರಣಿ ಈಶ್ವರಪ್ಪ ಒಂದು ಸಮೀಕರಣವನ್ನು ರಚನೆ ಮಾಡಿದ್ದಾರೆ. ಪಕ್ಷ + ಕಾರ್ಯಕರ್ತ = ಹೀರೋ ಅಂತೆ, ಪಕ್ಷ-ಕಾರ್ಯಕರ್ತ= ಜೀರೋ ಅಂತೆ. ತಾನು ಪಕ್ಷದಿಂದ ಹೊರಬಿದ್ದಿರುವುದಕ್ಕೆ ಜೀರೋ ಆದೆ ಅಂತ ಹೇಳುವ ಪ್ರಯತ್ನ ಅವರು ಮಾಡಿದರೋ ಅಂತ ಅಲ್ಲಿದ್ದವರಿಗೆ ಭಾಸವಾಗಿರಬಹುದು.

ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಹಿರಿಯ ರಾಜಕಾರಣಿ ಕೆಎಸ್ ಈಶ್ವರಪ್ಪ ಇಂದು ಪತ್ರಿಕಾ ಗೋಷ್ಠಿಯೊಂದನ್ನು ನಡೆಸಿ ಮಾತಾಡಿದರು. ಅವರೇ ಹೇಳುವಂತೆ ಪಕ್ಷಕ್ಕೆ ವಾಪಸ್ಸಾಗುವಂತೆ ಬುಲಾವ್ ಬಂದಿದೆಯಂತೆ ಆದರೆ ಆವರಿನ್ನೂ ತಮ್ಮ ಅಭಿಪ್ರಾಯ ತಿಳಿಸಿಲ್ಲವಂತೆ! ನಿಮಗೆ ನೆನಪಿರಬಹುದು, ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ವಿರುದ್ಧ ಬಂಡಾಯವೆದ್ದು ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿದಾಗ ಪಕ್ಷ ಅವರನ್ನು 6-ವರ್ಷ ಅವಧಿಗೆ ಉಚ್ಚಾಟಿಸಿತ್ತು. ಕೇವಲ ಚುನಾವಣೆಗಳು ಬಂದಾಗ ಮಾತ್ರ ಪಕ್ಷಕ್ಕೆ ವಾಪಸ್ಸು ಕರೆಯುವ ಕೆಲಸವಾಗುತ್ತದೆ. ಅದರೆ ತಾನು ಕಾರ್ಯಕರ್ತರೊಂದಿಗೆ ಚರ್ಚಿಸಬೇಕಾಗುತ್ತದೆ ಅಂತ ಅವರು ಹೇಳುತ್ತಾರಾದರೂ ಬಿಜೆಪಿಗೆ ತನ್ನ ಪ್ರಧಾನ್ಯತೆ ಅಂತ ಹೇಳುವುದನ್ನು ಮರೆಯಲ್ಲ. ನಂತರ ಅವರು ಪಕ್ಷದಿಂದ ಹೊರಬಿದ್ದರೂ ತನ್ನ ಅಸ್ತಿತ್ವಕ್ಕೇನೋ ತೊಂದರೆಯಾಗಿಲ್ಲ ಎನ್ನುತ್ತಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಸ್ನೇಹಿತರೊಬ್ಬರು ದಿಗ್ಗಜರ ನಡುವೆ ಹೋರಾಟ ನಡೆಸಿ ಗೆಲುವು ಸಾಧಿಸಿದನ್ನು ಹೇಳುತ್ತಾರೆ. ನಗರಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವ ಅಂಶವನ್ನು ತಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದು ಈಶ್ವರಪ್ಪ ಹೇಳುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಿರುವ ರಾಘವೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಬೇಕು: ಕೆಎಸ್ ಈಶ್ವರಪ್ಪ

Follow us on