ದಾಖಲೆಯ ಮತದಾನವಾಗಿರುವುದು ನನ್ನ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ: ನಿಖಿಲ್ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Nov 14, 2024 | 4:10 PM

ಹೆಚ್ ಡಿ ದೇವೇಗೌಡ ಪ್ರಚಾರಕ್ಕೆ ಬಂದಿದ್ದು ಮತ್ತು ಕುಮಾರಸ್ವಾಮಿಯವರನ್ನು ಜಮೀರ್ ಅಹ್ಮದ್ ಕರಿಯ ಅಂತ ಕರೆದಿದ್ದು ಎದುರಾಳಿಗಳಿಗೆ ಹಿನ್ನಡೆಯಾಗುತ್ತಾ ಅಂತ ಕೇಳಿದ್ದಕ್ಕೆ ಉತ್ತರಿಸಿದ ನಿಖಿಲ್, ಪ್ರತಿಸ್ಪರ್ಧಿಗಳ ಕಾಮೆಂಟ್​ಗಳಿಗೆ ಉತ್ತರಿಸುವ ಗೋಜಿಗೆ ತಾವ್ಯಾರೂ ಹೋಗಿಲ್ಲ, ಆದರೆ ಅವರಿಗೆಲ್ಲ ಮತದಾರ ಉತ್ತರಿಸಿದ್ದಾನೆ ಎಂಬ ವಿಶ್ವಾಸ ತನಗಿದೆ ಎಂದರು.

ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಮ್ಮ ರಾಮನಗರ ವರದಿಗಾರನೊಂದಿಗೆ ಮಾತಾಡುತ್ತಾ, ತನ್ನ ಕರೆಗೆ ಓಗೊಟ್ಟು ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಚನ್ನಪಟ್ಟಣದ ಜನ ತಮ್ಮ ತಮ್ಮ ಊರುಗಳಿಗೆ ಬಂದು ಮತದಾನ ಮಾಡಿದ್ದಾರೆ, ಅದೇ ಕಾರಣಕ್ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ಶೇಕಡ 78.80 ರಷ್ಟು ವೋಟಿಂಗ್ ಆಗಿದೆ, ತನಗೊಂದು ಅವಕಾಶ ಕೊಡಿ ಅಂತ ಜನರನ್ನು ಕೇಳಿದ್ದೆ, ಅವರು ತನಗೆ ಮತ ನೀಡಿರುವ ಆತ್ಮವಿಶ್ವಾಸವಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Karnataka Bypolls: ದೈಹಿಕವಾಗಿ ಅಸಹಾಯಕಳಾದ ಮಹಿಳೆಗೆ ತಮ್ಮ ಕಾರಲ್ಲಿ ಮನೆ ತಲುಪಿಸಿದ ನಿಖಿಲ್ ಕುಮಾರಸ್ವಾಮಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.