Karnataka Bypolls: ದೈಹಿಕವಾಗಿ ಅಸಹಾಯಕಳಾದ ಮಹಿಳೆಗೆ ತಮ್ಮ ಕಾರಲ್ಲಿ ಮನೆ ತಲುಪಿಸಿದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಹೆಚ್ ಡಿ ಕುಮಾರಸ್ವಾಮಿ ಜನಪ್ರಿಯ ವ್ಯಕ್ತಿ ಅನ್ನೋದು ನಿರ್ವಾವಿದಿತ, ಆದರೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಪ್ರಚಾರದ ವೇಳೆ ಕ್ಷೇತ್ರದಲ್ಲಿ ಗ್ರಾಮಗಳನ್ನು ಸುತ್ತುತ್ತಾ ಜನಾನುರಾಗಿಯಾಗಿದ್ದಾರೆ. ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಜನರು ಪಡುವ ತವಕ ಅದರ ದ್ಯೋತಕವಾಗಿದೆ.
ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಶೇಕಡ 48ರಷ್ಟು ಮತದಾನವಾಗಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬಿರುಸಿನಿಂದ ಓಡಾಡುತ್ತಿದ್ದಾರೆ. ನಡೆಲಾಗದ ಸ್ಥಿತಿಯಲ್ಲಿದ್ದ ಮಹಿಖೆಯೊಬ್ಬರು ಮತ ಚಲಾಯಿಸಿದ ಬಳಿಕ ಮನೆಗೆ ವಾಪಸ್ಸು ಹೋಗಲು ನೆರವು ಯಾಚಿಸುತ್ತಿದ್ದುದನ್ನು ಗಮನಿಸಿದ ನಿಖಿಲ್ ತನ್ನ ಕಾರಲ್ಲೇ ಅವರನ್ನು ಮನೆಗೆ ಬಿಟ್ಟು ಬರುವಂತೆ ಚಾಲಕನಿಗೆ ಹೇಳಿದರು. ಇಂಥ ಸಣ್ಣಪುಟ್ಟ ಕೆಲಸಗಳು ಮುಂದೆ ಅವರ ರಾಜಕೀಯ ಬದುಕಿನಲ್ಲಿ ನೆರವಾಗಲಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ರಾಮನಗರಕ್ಕೆ ಕೈಗಾರಿಕೆಗಳನ್ನು ತಂದು ನಿರುದ್ಯೋಗ ಸಮಸ್ಯೆ ನೀಗಿಸಲಿದ್ದಾರೆ: ನಿಖಿಲ್
Latest Videos