ಎಫ್ಎಸ್ಎಲ್ ವರದಿ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ವಿರುದ್ಧ ಇದು ಪಕ್ಕಾ ಸಾಕ್ಷಿ
ರೇಣುಕಾ ಸ್ವಾಮಿಯ ಹತ್ಯೆ ನಡೆದ ಬಳಿಕ ಪಟ್ಟಣಗೆರೆ ಶೆಡ್ನಿಂದ ನೇರವಾಗಿ ಮನೆಗೆ ಬಂದಿದ್ದ ದರ್ಶನ್ ಬಟ್ಟೆಯನ್ನು ಮನೆಯಲ್ಲಿ ಇಟ್ಟಿದ್ದರು. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅದೇ ಬಟ್ಟೆಯಲ್ಲಿ ರೇಣುಕಾ ಸ್ವಾಮಿಯ ರಕ್ತ ಇತ್ತು ಎಂಬುದು ಖಚಿತವಾಗಿದೆ. ಇಂತಹ ಅನೇಕ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಎಷ್ಟೇ ಪ್ರಯತ್ನಿಸಿದರೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳುವುದು ದರ್ಶನ್ಗೆ ಕಷ್ಟವಾಗಿದೆ. ಕೊಲೆ ನಡೆದ ಬಳಿಕ ಸಾಕ್ಷಿ ನಾಶಕ್ಕೆ ಪ್ರಯತ್ನ ನಡೆದಿತ್ತು. ಆದರೆ ಪೊಲೀಸರು ವಶಪಡಿಸಿಕೊಂಡ ವಸ್ತುಗಳಿಂದ ಮಹತ್ವದ ಮಾಹಿತಿ ಸಿಗುತ್ತಿದೆ. ಕೊಲೆ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಗಳಲ್ಲಿ ಸಿಕ್ಕಿರುವ ರಕ್ತದ ಕಲೆಗಳು ರೇಣುಕಾ ಸ್ವಾಮಿಯ ದೇಹದ್ದು ಎಂಬುದು ಈಗ ಎಫ್ಎಸ್ಎಲ್ ವರದಿಯಲ್ಲಿ ಪತ್ತೆ ಆಗಿದೆ. ಇನ್ನೂ ಹಲವು ವರದಿಗಳು ಹೈದರಾಬಾದ್ನಿಂದ ಬರಬೇಕಿದೆ. ಕೆಲವೇ ದಿನಗಳಲ್ಲಿ ಆ ಮಾಹಿತಿಗಳು ಕೂಡ ಪೊಲೀಸರಿಗೆ ಸಿಗಲಿವೆ. ಮುಂದಿನ ತಿಂಗಳು ಚಾರ್ಚ್ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಅಪರಾಧಿಗಳಿಗೆ ಆದಷ್ಟ ಬೇಗ ಶಿಕ್ಷೆ ಕೊಡಿಸಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us