ದರ್ಶನ್ ನೋಡಿ ಬೇರೆ ಭಾಷೆಯವರು ನಗುತ್ತಿದ್ದಾರಾ? ಕರಿ ಸುಬ್ಬು ಹೇಳಿದ್ದಿಷ್ಟು..
ನಟ ದರ್ಶನ್ ಜೈಲು ಸೇರಿದ್ದರಿಂದ ಕನ್ನಡ ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕಿ ಆಗಿದೆ. ಇದರ ಬಗ್ಗೆ ನಿರ್ಮಾಪಕ ಕರಿ ಸುಬ್ಬು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಿಂದ ಪರಭಾಷೆಯ ಮಂದಿ ನಗುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇದರಿಂದಾಗಿ ಸ್ಯಾಂಡಲ್ವುಡ್ ಮಂದಿಗೆ ಬೇಸರ ಇದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆಗಿದ್ದಾರೆ.
ಸ್ಟಾರ್ ಆಗಿ ಮಿಂಚುತ್ತಿದ್ದ ನಟ ದರ್ಶನ್ ಅವರು ಜೈಲಿನಲ್ಲಿ ಕಾಲ ಕಳೆಯುವಂತಹ ಪರಿಸ್ಥಿತಿ ಬಂದಿದೆ. ಇದರ ಬಗ್ಗೆ ಹಿರಿಯ ನಿರ್ಮಾಪಕ ಕರಿ ಸುಬ್ಬು ಮಾತನಾಡಿದ್ದಾರೆ. ಇತ್ತೀಚೆಗೆ ಸಾ.ರಾ. ಗೋವಿಂದು ಅವರ ಬಳಿ ಪರಭಾಷೆಯ ಕೆಲವರು ಬಂದು ದರ್ಶನ್ ವಿಚಾರ ಪ್ರಸ್ತಾಪಿಸಿ ನಗುತ್ತಿದ್ದರು ಎಂಬ ಮಾಹಿತಿ ಇದೆ. ಇದಕ್ಕೆ ಕರಿ ಸುಬ್ಬು ಪ್ರತಿಕ್ರಿಯಿಸಿದ್ದಾರೆ. ‘ಸಾ.ರಾ. ಗೋವಿಂದು ಅವರು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೋದಾಗ ಅಲ್ಲಿ ಈ ಮಾತು ಬಂದಿರಬಹುದು. ಈ ರೀತಿ ಆಗುತ್ತದೆ. ಈ ಹಿಂದೆ ಕನ್ನಡದಲ್ಲಿ ಅಭಿನಯಿಸಿದ ನಟಿಯೊಬ್ಬರು ಕೊಲೆ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆಗ ಚಿತ್ರರಂಗಕ್ಕೆ ಕಳಂಕ ಬರಲಿಲ್ಲವೇ? ಈ ರೀತಿ ತುಂಬಾ ಪ್ರಕರಣ ಆಗಿದೆ. ಈಗ ನಡೆದು ಹೋಗಿದೆ. ದರ್ಶನ್ ಕೂಡ ಮೌನಿ ಆಗಿದ್ದಾರೆ. ವಿಚಾರಣೆ ನಡೆಯುತ್ತಿರುವಾಗ ನಾನು ಮಾತನಾಡುವುದು ಸರಿಯಲ್ಲ’ ಎಂದು ಕರಿ ಸುಬ್ಬು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us