ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್
ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕರೂ ಕೂಡ ಇಷ್ಟು ದಿನ ಜಗದೀಶ್ಗೆ ಶ್ಯೂರಿಟಿ ಸಿಕ್ಕಿರಲಿಲ್ಲ. ಹಾಗಾಗಿ ಜಾಮೀನು ಸಿಕ್ಕು 6 ದಿನ ಕಳೆದವರೆಗೂ ಜೈಲಲ್ಲೇ ಜಗದೀಶ್ ಕಾಲ ಕಳೆಯಬೇಕಾಯಿತು. ಇಂದು (ಡಿ.18) ಜಗದೀಶ್ನ ಬಿಡುಗಡೆ ಮಾಡಲಾಯಿತು. ಅವರ ಸಹೋದರಿ ಬಂದು ಕಾರಿನಲ್ಲಿ ಕರೆದುಕೊಂಡು ಹೋದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 6ನೇ ಆರೋಪಿ ಜಗದೀಶ್ ರಿಲೀಸ್ ಆಗಿದ್ದಾರೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಜಗದೀಶ್ ಬಿಡುಗಡೆ ಆಗಿದೆ. ಆಗಸ್ಟ್ 29ರಂದು ಶಿವಮೊಗ್ಗ ಜೈಲಿಗೆ ಜಗದೀಶ್ನನ್ನು ಸ್ಥಳಾಂತರ ಮಾಡಲಾಗಿತ್ತು. ಇತ್ತೀಚೆಗೆ ಜಗದೀಶ್ಗೆ ಜಾಮೀನು ನೀಡಲಾಗಿತ್ತು. ಶ್ಯೂರಿಟಿ ಸಿಗದ ಹಿನ್ನೆಲೆ ರಿಲೀಸ್ ವಿಳಂಬವಾಗಿತ್ತು. 6 ದಿನಗಳ ನಂತರ ಜೈಲಿನಿಂದ ಹೊರಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

