AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Session: ವಕ್ಫ್ ಇಲಾಖೆಯಿಂದ ಜಾರಿಯಾದ ನೋಟೀಸ್​ಗಳನ್ನು ವಾಪಸ್ಸು ಪಡೀತೇವೆ: ಸಿದ್ದರಾಮಯ್ಯ

Karnataka Assembly Session: ವಕ್ಫ್ ಇಲಾಖೆಯಿಂದ ಜಾರಿಯಾದ ನೋಟೀಸ್​ಗಳನ್ನು ವಾಪಸ್ಸು ಪಡೀತೇವೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 18, 2024 | 7:55 PM

Share

Karnataka Assembly Session: ವಿಷಯವನ್ನು ಕೆದಕುತ್ತಾ ಹೋದಂತೆ ದೊಡ್ಡದಾಗುತ್ತಾ ಹೋಗುತ್ತದೆ ವಿನಃ ಪರಿಹಾರ ಸಿಗಲ್ಲ, ಶೀವತ್ಸ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವರು ಉತ್ತರಿಸುತ್ತಾರೆ, ವಕ್ಫ್ ವಿಷಯದ ಬಗ್ಗೆ ಮಾತಾಡುವುದಾದರೆ, ಯಾರಿಗೆಲ್ಲ ನೋಟೀಸ್​ಗಳನ್ನು ನೀಡಲಾಗಿದೆಯೋ ಅವೆಲ್ಲವನ್ನು ವಾಪಸ್ಸು ಪಡೆಯಲಾಗುವುದು, ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ತಾನು ಸೂಚನೆ ನೀಡಿರುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ.

ಬೆಳಗಾವಿ: ವಿಧಾನಸಭಾ ಅಧಿವೇಶನದಲ್ಲಿ ಇವತ್ತು ವಕ್ಫ್ ಇಲಾಖೆಯಿಂದ ರೈತರು, ಮಠಮಾನ್ಯ ಮತ್ತು ದೇವಸ್ಥಾನಗಳಿಗೆ ನೀಡಿರುವ ನೋಟೀಸ್ ಗಳ ಬಗ್ಗೆ ಜೋರು ಚರ್ಚೆ ಆಯಿತು. ಮೈಸೂರು ಬಿಜೆಪಿ ಶಾಸಕ ಟಿಎಸ್ ಶ್ರೀವತ್ಸ, ಮೈಸೂರು ನಗರದ ಮುನೇಶ್ವರ ನಗರದಲ್ಲಿ ಸರ್ವೇ ನಂಬರ್ 153ರಲ್ಲಿರುವ 110 ಸೈಟುಗಳಿಗೆ ದಿನಾಂಕ 20 ಜುಲೈ 2023 ರಲ್ಲಿ ನೀಡಲಾಗಿದೆ ಅಂತ ಹೇಳಿದಾಗ, ಅಗ ಸಿದ್ದರಾಮಯ್ಯ ಸರ್ಕಾರವೇ ಅಧಿಕಾರದಲ್ಲಿತ್ತು ಎಂದು ಉಳಿದ ಬಿಜೆಪಿ ಶಾಸಕರು ಹೇಳುತ್ತಾರೆ. ಜಮೀರ್ ಅಹ್ಮದ್ ಉತ್ತರ ನೀಡಲು ಎದ್ದುನಿಂತು ಮಾತಾಡುತ್ತಾರಾದರೂ ಅವರು ಹೇಳಿದ್ದು ಅರ್ಥವಾಗಲ್ಲ. ಅಗ ಸಿಎಂ ಸಿದ್ದರಾಮಯ್ಯ ಸರ್ಕಾರದ ಪರವಾಗಿ ಉತ್ತರಿಸಲು ಎದ್ದು ನಿಲ್ಲುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಎಐಸಿಸಿ ಅಧಿವೇಶನಕ್ಕೆ ಅಡ್ಡಿಪಡಿಸುವ ಪ್ರಯತ್ನ ಬಿಜೆಪಿ ಮಾಡಿದರೆ ಕಾನೂನುರೀತ್ಯಾ ಕ್ರಮ: ಸಿದ್ದರಾಮಯ್ಯ