ರೇಣುಕಾಸ್ವಾಮಿ ಕೊಲೆ; ಕಾನೂನು ವ್ಯವಸ್ಥೆ ಮೇಲೆ ವಿಶ್ವಾಸ ಇಮ್ಮಡಿಗೊಂಡಿದೆ, ತೀರ್ಪು ನೆಮ್ಮದಿ ನೀಡಿದೆ: ಕಾಶೀನಾಥಯ್ಯ, ತಂದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಜಾಮೀನನ್ನು ಸುಪ್ರಿಮ್ ಕೋರ್ಟ್ ರದ್ದು ಮಾಡಿರುವುದರಿಂದ ಅವರನ್ನು ಪುನಃ ಬಂಧಿಸಿ ಜೈಲಿಗೆ ಕಳಿಸುವ ಏರ್ಪಾಟುಗಳನ್ನು ಮಾಡಲಾಗುತ್ತಿದೆ. ಜಾಮೀನು ಪಡೆದು ತಮ್ಮ ತಮ್ಮ ಊರು ಮತ್ತು ಮನೆಗಳಲ್ಲಿರುವ ಅರೋಪಿಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ತಪ್ಪಿಸಿಕೊಳ್ಳಬಾದೆಂಬ ಕಾರಣಕ್ಕೆ ಹಾಗೆ ಮಾಡಲಾಗುತ್ತಿದೆ.
ಬೆಂಗಳೂರು, ಆಗಸ್ಟ್ 14: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಮತ್ತು ಚಿತ್ರನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 7 ಜನರ ಜಾಮೀನನ್ನು ಸರ್ವೋಚ್ಚ ನ್ಯಾಯಾಲಯ ರದ್ದು ಮಾಡಿರುವುದಕ್ಕೆ ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ (Kashinathaiah) ತೃಪ್ತಿ ಮತ್ತು ನಿರಾಳತೆಯನ್ನು ವ್ಯಕ್ತಪಡಿಸಿದ್ದಾರೆ. ಕೋರ್ಟ್ ನಲ್ಲಿ ಇವತ್ತು ತೀರ್ಪು ಹೊರಬೀಳುವ ಸಮಯದಲ್ಲಿ ಕಾಶೀನಾಥಯ್ಯ ಲಿಂಗಪೂಜೆಗೆ ಕುಳಿತಿದ್ದರು, ಅವರ ಬೇಡಿಕೆ ಫಲಿಸಿದೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಹೆಚ್ಚಾಗಿದೆ, ಹೈಕೋರ್ಟ್ ಅರೋಪಗಳಿಗೆ ಜಾಮೀನು ನೀಡಿದಾಗ ಆತಂಕ ಶುರುವಾಗಿತ್ತು, ಸರ್ಕಾರದ ವಿಶೇಷ ಕಾಳಜಿ ಮತ್ತು ಸರ್ವೋಚ್ಚ ನ್ಯಾಯಾಲಯ ತೀರ್ಪು ಅಪರಾಧಿಗಳು ಎಷ್ಟೇ ದೊಡ್ಡವರಾಗಿದ್ರೂ ಕಾನೂನಿಂದ ಪಾರಾಗಲಾರರು ಎಂಬ ಸಂದೇಶ ನೀಡಿದೆ ಎಂದು ಕಾಶೀನಾಥಯ್ಯ ಹೇಳಿದರು.
ಇದನ್ನೂ ಓದಿ: Video: ರೇಣುಕಾಸ್ವಾಮಿ ಕೊಲೆ : ದರ್ಶನ್, ಪವಿತ್ರಾ ಬೇಲ್ ರದ್ದು ಮತ್ತೆ ಜೈಲು ಪಾಲು, ಸರ್ಕಾರಿ ವಕೀಲರು ಹೇಳಿದ್ದೇನು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

