AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan Thoogudeepa: ದರ್ಶನ್​ ಜಾಮೀನು ರದ್ದು; ಪೊಲೀಸರ ಮುಂದಿನ ಕಾನೂನು ಕ್ರಮವೇನು?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಮತ್ತೆ ಜೈಲೇ ಗತಿ ಆಗಿದೆ. ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಾಗಾದರೆ ದರ್ಶನ್​​ಗೆ ಮುಂದಿರುವ ಆಯ್ಕೆಗಳೇನು, ಪೊಲೀಸರ ಮುಂದಿನ ಕಾನೂನು ಕ್ರಮಗಳು ಹೇಗಿರಲಿದೆ ಎಂದು ಸಂಪೂರ್ಣ ಮಾಹಿತಿ ಇಲ್ಲಿದೆ. 

Darshan Thoogudeepa: ದರ್ಶನ್​ ಜಾಮೀನು ರದ್ದು; ಪೊಲೀಸರ ಮುಂದಿನ ಕಾನೂನು ಕ್ರಮವೇನು?
ದರ್ಶನ್
Shivaprasad B
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 14, 2025 | 12:43 PM

Share

ಬೆಂಗಳೂರು, ಆಗಸ್ಟ್​ 14: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ನಟ ದರ್ಶನ್ (Darshan), ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ (Supreme Court)​ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಮತ್ತೆ ಕೊಲೆ ಆರೋಪಿಗಳಿಗೆ ಜೈಲೇ ಗತಿ ಎನ್ನುವಂತಾಗಿದೆ. ಹಾಗಾದರೆ ದರ್ಶನ್​​ಗೆ ಮುಂದಿರುವ ಆಯ್ಕೆಗಳೇನು, ಪೊಲೀಸರ ಮುಂದಿನ ಕಾನೂನು ಕ್ರಮಗಳು ಹೇಗಿರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೊದಲಿಗೆ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್​ ಸುಪ್ರೀಂಕೋರ್ಟ್​ನ ಜಾಮೀನು ರದ್ದು ಆದೇಶದ ಪ್ರತಿ ಪಡೆಯಲಿದ್ದಾರೆ. ಆ ಬಳಿಕ ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ರದ್ದು ಆದೇಶದ ಪ್ರತಿ ಸಲ್ಲಿಕೆ ಮಾಡಿ ಅರೆಸ್ಟ್ ವಾರೆಂಟ್ ಪಡೆಯಲಿದ್ದಾರೆ.

ಇದನ್ನೂ ಓದಿ: ದರ್ಶನ್​ ಕೇಸ್​ ಎಫೆಕ್ಟ್​: ಜೈಲಲ್ಲಿ ಖೈದಿಗಳು ಸಿಗರೇಟ್​ ಸೇದುವ ಹಾಗಿಲ್ಲ; ಸುಪ್ರೀಂ ಖಡಕ್​ ಸೂಚನೆ

ಇದನ್ನೂ ಓದಿ
Image
ದರ್ಶನ್​, ಪವಿತ್ರಾ ಬೇಲ್ ರದ್ದು, ಸರ್ಕಾರಿ ವಕೀಲರು ಹೇಳಿದ್ದೇನು?
Image
ಸ್ವಯಂಕೃತ ತಪ್ಪುಗಳೇ ಕುಣಿಕೆ ಆಯ್ತು ; ದರ್ಶನ್ ಜಾಮೀನು ರದ್ದಿಗೆ ಕಾರಣಗಳು
Image
ರೇಣುಕಾಸ್ವಾಮಿ ಕೊಲೆ: ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು ರದ್ದು
Image
ದರ್ಶನ್​​ಗೆ ಮತ್ತೆ ಜೈಲು; ಇಲ್ಲಿದೆ ವಿಚಾರಣೆಯ ಲೈವ್ ವಿಡಿಯೋ

ಕೋರ್ಟ್​ನಿಂದ ಅರೆಸ್ಟ್ ವಾರೆಂಟ್ ಪಡೆದು ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಲಿದ್ದಾರೆ. ಅದಕ್ಕೂ ಮೊದಲೇ ಆರೋಪಿಗಳು ಸರೆಂಡರ್ ಆದರೆ ಅರೆಸ್ಟ್ ವಾರೆಂಟ್ ಪಡೆಯುವ ಅವಶ್ಯಕತೆಯಿಲ್ಲ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಆಯಾ ಜೈಲುಗಳಿಗೆ ಆರೋಪಿಗಳನ್ನು ಪೊಲೀಸರು ವರ್ಗಾಯಿಸಲಿದ್ದಾರೆ.

ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆ

ದರ್ಶನ್ ಮುಂದೆ ಸದ್ಯಕ್ಕಿಲ್ಲ ಬೇರೆ ಆಯ್ಕೆಗಳಲಿಲ್ಲ. ಶೀಘ್ರದಲ್ಲೇ ಸೆಷನ್ಸ್ ಕೋರ್ಟ್​ಗೆ ಶರಣಾಗಬೇಕಿದೆ. ಇಂದು ತೀರ್ಪಿನ ಪ್ರತಿ ಸಿಕ್ಕ ಬಳಿಕ ಈ ಬಗ್ಗೆ ಶರಣಾಗುವುದು ಯಾವಾಗ ಎಂದು ಸಂಜೆಯೊಳಗೆ ತೀರ್ಮಾನ ಸಾಧ್ಯತೆ ಇದೆ. ಸದ್ಯ ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಗಾಗಿ ವಕೀಲರು ಕಾಯುತ್ತಿದ್ದಾರೆ.

ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್​ ಮಾಡುವ ಸಾಧ್ಯತೆ

ಇನ್ನು ದರ್ಶನ್​ ಮತ್ತೆ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ. ಈ ಹಿಂದೆ 63 ದಿನಗಳ ಕಾಲ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದರು. ಅಕ್ಟೋಬರ್ 30ಕ್ಕೆ ಅಲ್ಲಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್​ ಮಾಡುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ಜೈಲಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್ ಕೇಸ್: ಎಲ್ಲಾ ಹೈಕೋರ್ಟ್, ಜೈಲುಗಳಿಗೆ ತನ್ನ ಆದೇಶದ ಪ್ರತಿ ಹೋಗಬೇಕೆಂದ ಸುಪ್ರೀಂಕೋರ್ಟ್; ಅಂಥದ್ದೇನಿದೆ ತೀರ್ಪಿನಲ್ಲಿ?

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ದರ್ಶನ್​ ಬಳಲಿದ್ದರು. ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹಿತ ಮಾಡಿಸಲಾಗಿತ್ತು. ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ದರ್ಶನ್​ ಜಾಮೀನು ಪಡೆದಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Thu, 14 August 25