ದರ್ಶನ್ ಕೇಸ್: ಎಲ್ಲಾ ಹೈಕೋರ್ಟ್, ಜೈಲುಗಳಿಗೆ ತನ್ನ ಆದೇಶದ ಪ್ರತಿ ಹೋಗಬೇಕೆಂದ ಸುಪ್ರೀಂಕೋರ್ಟ್; ಅಂಥದ್ದೇನಿದೆ ತೀರ್ಪಿನಲ್ಲಿ?
Darshan Case: Supreme Court wants its order copy to sent all high courts and jails: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೂಪ ಮತ್ತಿತರ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಇದರೊಂದಿಗೆ ದರ್ಶನ್, ಪವಿತ್ರಾಗೌಡ ಮತ್ತಿತರರು ಮತ್ತೆ ಜೈಲುಪಾಲಾಗಲಿದ್ದಾರೆ. ಜಾಮೀನು ನೀಡುವ ಹೈಕೋರ್ಟ್ ಕ್ರಮವನ್ನು ಸುಪ್ರೀಂ ಆಕ್ಷೇಪಿಸಿದೆ. ಜೈಲಿನಲ್ಲಿ ದರ್ಶನ್ ಮತ್ತಿತರರಿಗೆ ವಿಶೇಷ ಸೌಲಭ್ಯ ನೀಡುತ್ತಿದ್ದುದನ್ನೂ ಆಕ್ಷೇಪಿಸಿದೆ.

ನವದೆಹಲಿ, ಆಗಸ್ಟ್ 14: ರೇಣುಕಾಸ್ವಾಮಿ ಹಲ್ಲೆ ಮತ್ತು ಹತ್ಯೆ ಪ್ರಕರಣದಲ್ಲಿ ಸಿಲುಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ (supreme court) ವಜಾಗೊಳಿಸಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿರುವ ಸುಪ್ರೀಂಕೋರ್ಟ್, ಇಡೀ ದೇಶಕ್ಕೆ ಗುರುತರ ಸಂದೇಶ ರವಾನಿಸಿದೆ. ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಡೆಯುತ್ತಿದ್ದ ಸವಲತ್ತುಗಳೇ ಈಗ ಅವರಿಗೆ ಕಷ್ಟ ತಂದಿತ್ತಿವೆ. ‘ಆರ್ಟಿಕಲ್ 14 ಪ್ರಕಾರ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿ ಎಷ್ಟೇ ದೊಡ್ಡವರಿದ್ದರೂ ಕಾನೂನಿಗಿಂತ ದೊಡ್ಡವರಲ್ಲ’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಇದು ಲ್ಯಾಂಡ್ಮಾರ್ಕ್ ಜಡ್ಮೆಂಟ್ ಎಂದು ಬಣ್ಣಿಸಿದೆ.
ಜೈಲಿನಲ್ಲಿ ಆರೋಪಿಗಳಿಗೆ ವಿವಿಧ ಸವಲತ್ತುಗಳನ್ನು ನೀಡಲಾಗುತ್ತಿದ್ದುದನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಎತ್ತಿ ತೋರಿಸಿದ್ದಾರೆ. ‘ಆರೋಪಿಗಳಿಗೆ 5 ಸ್ಟಾರ್ಟ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಇನ್ನು ಮುಂದೆ ಇಂಥದ್ದು ಕಂಡು ಬಂದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಗೃಹ ಇಲಾಖೆಯನ್ನು ಕರೆಸಲಾಗುವುದು’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: SC on Darshan Bail: ‘ಕಾನೂನಿಗಿಂತ ಯಾರೂ ದೊಡ್ಡವರಲ್ಲ’ ದರ್ಶನ್ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್
ದರ್ಶನ್ ಅವರು ಜೈಲಿನಲ್ಲಿರುವಾಗ ಸಿಗರೇಟು ಸೇದುತ್ತಿರುವ ಮತ್ತು ವಿವಿಧ ಸವಲತ್ತುಗಳನ್ನು ಅನುಭವಿಸುತ್ತಿರುವ ಫೋಟೋ ಮತ್ತು ವಿಡಿಯೋಗಳು ಬೆಳಕಿಗೆ ಬಂದಿದ್ದುವು. ಇವುಗಳನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿ ತೀರ್ಪು ನೀಡಿದೆ.
ಹೈಕೋರ್ಟ್ ವಿರುದ್ಧ ಸುಪ್ರೀಂ ತರಾಟೆ
ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ ಕ್ರಮವನ್ನು ಸುಪ್ರೀಂಕೋರ್ಟ್ ಆಕ್ಷೇಪಿಸಿದೆ. ಸಾಕ್ಷ್ಯಗಳನ್ನು ಸರಿಯಾಗಿ ವಿಚಾರಣೆ ನಡೆಸಲು ಟ್ರಯಲ್ ಕೋರ್ಟ್ ಸೂಕ್ತವಾದ ವೇದಿಕೆಯಾಗಿದೆ. ಪ್ರಕರಣದ ಗಂಭೀರತೆಯನ್ನು ಸರಿಯಾಗಿ ಅರಿತುಕೊಳ್ಳದೇ ಹೈಕೋರ್ಟ್ ಜಾಮೀನು ನೀಡಿದ್ದು ತಪ್ಪು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ಎಲ್ಲಾ ಜೈಲು ಮತ್ತು ಹೈಕೋರ್ಟ್ಗಳಿಗೆ ಆದೇಶದ ಪ್ರತಿ ಕಳುಹಿಸಲು ಸೂಚನೆ
ಹೈಕೋರ್ಟ್ನ ಪರಿಮಿತಿ ಏನು, ಆರೋಪಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಬರೆದಿರುವ ಸುಪ್ರೀಂಕೋರ್ಟ್, ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ ಮತ್ತು ಜೈಲಿಗಳಿಗೆ ಕಳುಹಿಸಲು ಸೂಚಿಸಿದೆ. ಇದರೊಂದಿಗೆ ಜೈಲಿನಲ್ಲಿ ಯಾವುದೇ ಆರೋಪಿಗಳಿಗೆ ವಿಶೇಷ ಸವಲತ್ತು ನೀಡಲಾಗುತ್ತಿದ್ದರೆ ಸಂಬಂಧಪಟ್ಟ ಜೈಲಧಿಕಾರಿಗಳಿಗೆ ಕುತ್ತು ಬರಬಹುದು.
ಇದನ್ನೂ ಓದಿ: ದರ್ಶನ್ ಜಾಮೀನು ರದ್ದಿಗೆ ಕಾರಣವಾದ ವಿಚಾರಗಳಿವು; ಈಗ ಯಾವ ಜೈಲು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧದ ಪ್ರಕರಣ…
ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ನೀಡಿದ್ದರೆನ್ನಲಾದ ರೇಣುಕಾಸ್ವಾಮಿಯ ಮೇಲೆ ದರ್ಶನ್ ಹಾಗೂ ಅವರ ಬೆಂಬಲಿಗರು ಹಲ್ಲೆ ಎಸಗಿ ಕೊಲೆ ಮಾಡಿದ ಆರೋಪ ಇದೆ. ಈ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. 2024ರ ಡಿಸೆಂಬರ್ 13ರಂದು ದರ್ಶನ್ ಹಾಗೂ ಇತರ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈಗ ಸುಪ್ರೀಂಕೋರ್ಟ್ ಆ ಜಾಮೀನನ್ನು ವಜಾಗೊಳಿಸಿದೆ. ದರ್ಶನ್ ಮತ್ತು ಗ್ಯಾಂಗ್ ಮತ್ತೆ ಜೈಲೂಟ ತಿನ್ನುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 14 August 25




