AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಮತ್ತೆ ಜೈಲಿಗೆ; ನಟಿ ರಮ್ಯಾ ರಿಯಾಕ್ಷನ್ ಏನು?

ದರ್ಶನ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ನಟಿ ರಮ್ಯಾ ಅವರು ಪ್ರತಿಕ್ರಿಯಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಯುತ ಪ್ರಕ್ರಿಯೆಗೆ ಅವರು ಒತ್ತು ನೀಡಿ ಎಂದಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಒತ್ತಿ ಹೇಳಿದ್ದಾರೆ. ಅವರ ಪೋಸ್ಟ್ ಈಗ ಎಲ್ಲ ಕಡೆಗಳಲ್ಲೂ ವೈರಲ್ ಆಗುತ್ತಿದೆ.

ದರ್ಶನ್ ಮತ್ತೆ ಜೈಲಿಗೆ; ನಟಿ ರಮ್ಯಾ ರಿಯಾಕ್ಷನ್ ಏನು?
ದರ್ಶನ್-ರಮ್ಯಾ
ರಾಜೇಶ್ ದುಗ್ಗುಮನೆ
|

Updated on: Aug 14, 2025 | 12:09 PM

Share

ನಟ ದರ್ಶನ್ (Darshan) ಅವರು ಮತ್ತೆ ಜೈಲು ಸೇರಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಬೆನ್ನಲ್ಲೇ ಅವರನ್ನು ಇಂದೇ ಬಂಧಿಸೋ ಸಾಧ್ಯತೆ ಇದೆ. ಈಗ ದರ್ಶನ್ ಪ್ರಕರಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಇಷ್ಟು ದಿನ ರಮ್ಯಾ vs ದರ್ಶನ್ ಫ್ಯಾನ್ಸ್ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈಗ ದರ್ಶನ್ ಜಾಮೀನು ರದ್ದು ಆದೇಶದ ಬೆನ್ನಲ್ಲೇ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ’ ಎಂದಿದ್ದಾರೆ ರಮ್ಯಾ.

‘ನ್ಯಾಯಯುತವಾಗಿ ಪ್ರಕ್ರಿಯೆಯನ್ನು ಅನುಸರಿಸಿ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಳ್ಳಿ. ಇದು ದೀರ್ಘ ಮತ್ತು ಕಠಿಣ. ಆದರೆ ಸುರಂಗದ ಕೊನೆಯಲ್ಲಿ ಬೆಳಕು ಇದೆ ಎಂಬ ನಂಬಿಕೆ ಇರಲಿ ಎಂದು ನಾನು ಇತರರಿಗೆ ಹೇಳುತ್ತೇನೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯ ಸಿಕ್ಕೇ ಸಿಗುತ್ತದೆ. ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ’ ಎಂದು ರಮ್ಯಾ ಕೋರಿದ್ದಾರೆ.

ಇದನ್ನೂ ಓದಿ
Image
ಗೌತಮ್ ಕೈಯಲ್ಲಿ ತಾಯಿಯ ಹಿಸ್ಟರಿ; ದುರ್ಗಾಗೆ ಬಂತು ಅಕ್ಕನ ನೆನಪು
Image
20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದ ‘ಸು ಫ್ರಮ್ ಸೋ’
Image
‘ಸತ್ಯ ಎಲ್ಲಕ್ಕಿಂತ ದೊಡ್ಡದು, ನ್ಯಾಯ ಸಿಗುತ್ತದೆ’; ಪವಿತ್ರಾ ಗೌಡ
Image
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?

ಇದನ್ನೂ ಓದಿ: ದರ್ಶನ್ ಜಾಮೀನು ರದ್ದಿಗೆ ಕಾರಣವಾದ ವಿಚಾರಗಳಿವು; ಈಗ ಯಾವ ಜೈಲು?

ಇತ್ತೀಚೆಗೆ ಮಾತನಾಡಿದ್ದ ರಮ್ಯಾ, ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ನಂಬಿಕೆ ಇದೆ’ ಎಂದು ಹೇಳಿದ್ದರು. ಈ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ರವಾನೆ ಮಾಡಿದ್ದರು. ಇದು ರಮ್ಯಾ ಅಸಮಾಧಾನಕ್ಕೆ ಕಾರಣ ಆಗಿತ್ತು. ರಮ್ಯಾ ಈ ಸಂಬಂಧ ದೂರು ಕೂಡ ದಾಖಲಿಸಿದ್ದರು. ಈ ದೂರು ಆಧರಿಸಿ ಕೆಲವರನ್ನು ಬಂಧಿಸಲಾಗಿದೆ. ಈಗ ದರ್ಶನ್ ಬಂಧನ ಬೆನ್ನಲ್ಲೇ ರಮ್ಯಾ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.