ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೋಡಿ ಕಣ್ಣೀರಿಟ್ಟ ರೇಣುಕಾಸ್ವಾಮಿ ಅಪ್ಪ
ನಟ ದರ್ಶನ್‌ಗೆ ಜೈಲಿನಲ್ಲಿ ಕಾಫಿ, ಸಿಗರೇಟ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಬೇಸರ ವ್ಯಕ್ತಪಡಿಸಿದ್ದು, ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೋಡಿ ಕಣ್ಣೀರಿಟ್ಟಿದ್ದಾರೆ.
ಚಿತ್ರದುರ್ಗ, ಆ.25: ನಟ ದರ್ಶನ್‌ಗೆ ಜೈಲಿನಲ್ಲಿ ಕಾಫಿ, ಸಿಗರೇಟ್ ವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಬೇಸರ ವ್ಯಕ್ತಪಡಿಸಿದ್ದು, ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೋಡಿ ಕಣ್ಣೀರಿಟ್ಟಿದ್ದಾರೆ. ಹೀಗಾದರೆ ಪ್ರಕರಣ ಸಿಬಿಐಗೆ ವಹಿಸಿಬೇಕೆಂದು ಅನಿಸುತ್ತಿದೆ. ದರ್ಶನ್ ಜೈಲಿನಲ್ಲಿದ್ದಾರೋ ಇಲ್ವೊ ಎಂಬ ಭಾವನೆ ಬರ್ತಿದೆ. ನಟ ದರ್ಶನ್ ಸಹ ಸಾಮಾನ್ಯ ಕೈದಿಯಂತೆಯೇ ಇರಬೇಕು. ಆದರೆ, ರೆಸಾರ್ಟ್ನಲ್ಲಿರುವಂತೆ ಕಂಡು ಶಾಕ್ ಆಯ್ತು. ನಮಗೆ ನೋವು, ಸಂಕಟ ಆಗುತ್ತಿದೆ ಎಂದು ಕಣ್ಣೀರು ಹಾಕಿದ ಅವರು, ಈ ಕುರಿತು ಮುಖ್ಯಮಂತ್ರಿ, ಗೃಹಸಚಿವರು ಗಮನಹರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 25, 2024 09:22 PM