ಗಣರಾಜ್ಯೋತ್ಸವ: ಜಿಬಿಎ ಎಡವಟ್ಟು, ಸ್ವಾಗತ ಫಲಕಗಳಲ್ಲಿ ಇನ್ನೂ ಬಿಬಿಎಂಪಿ ಹೆಸರು!

Edited By:

Updated on: Jan 26, 2026 | 9:36 AM

77ನೇ ಗಣರಾಜ್ಯೋತ್ಸವ ಸಂಭ್ರಮದ ನಡುವೆ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದೊಡ್ಡ ಎಡವಟ್ಟು ಮಾಡಿದೆ. ಸ್ವಾಗತ ಫಲಕಗಳಲ್ಲಿ ಜಿಬಿಎ ಬದಲಿಗೆ ಹಳೆಯ ಬಿಬಿಎಂಪಿ ಹೆಸರನ್ನೇ ಬಳಸಲಾಗಿದೆ. ಮುಖ್ಯಮಂತ್ರಿಗಳು, ರಾಜ್ಯಪಾಲರು ಭಾಗವಹಿಸುವ ಈ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಬೆಂಗಳೂರು, ಜನವರಿ 26: ಗಣರಾಜ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದೊಡ್ಡ ಪ್ರಮಾದ ಎಸಗಿದೆ. 77ನೇ ಗಣರಾಜ್ಯೋತ್ಸವ ಸ್ವಾಗತ ಫಲಕಗಳಲ್ಲಿ ಜಿಬಿಎ ಬದಲಿಗೆ ಹಳೆಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಸರನ್ನೇ ಅಳವಡಿಸಲಾಗಿದೆ. ಜಿಬಿಎ ರಚನೆಯಾಗಿ ಸಾಕಷ್ಟು ಸಮಯ ಕಳೆದಿದ್ದರೂ, ರಾಜ್ಯ ಮಟ್ಟದ ಮಹತ್ವದ ಕಾರ್ಯಕ್ರಮದಲ್ಲಿ ಈ ರೀತಿಯ ಎಡವಟ್ಟು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂಬ ಅಭಿಪ್ರಾಯ ಸಾರ್ವನಿಕ ವಲಯದಲ್ಲಿ ಕೇಳಿಬಂದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು. ಆದರೂ ಸ್ವಾಗತ ಬೋರ್ಡ್‌ಗಳಲ್ಲಿ ಜಿಬಿಎ ಬದಲು ಬಿಬಿಎಂಪಿ ಎಂದು ಬರೆಯಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ