ಶಾಸಕರ ವೇತನ ಪರಿಷ್ಕರಣೆ ವಿಷಯ ಸದನದಲ್ಲಿ ಚರ್ಚೆಗೆ ಬಂದಿಲ್ಲ, ನನಗಂತೂ ಹೆಚ್ಚಳ ಬೇಕಿಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಬಿಜೆಪಿಯಲ್ಲಿ ಭಿನ್ನಮತೀಯ ಅಂತ ಗುರುತಿಸಿಕೊಂಡಿದ್ದಾರೆ. ಸದನದ ಕಲಾಪದಲ್ಲಿ ಅವರು ಇತರ ನಾಯಕರೆಡೆ ಮುನಿಸನ್ನೇನೂ ಪ್ರಕಟಿಸಲಿಲ್ಲ. ಜನಪರವಾದ ಸಮಸ್ಯೆ ವಿರುದ್ಧ ಹೋರಾಡುವಾಗ ಎಲ್ಲರೂ ಒಟ್ಟಾಗಿ ಹೋರಾಡುತ್ತೇವೆ, ಇವತ್ತು ಸದನದಲ್ಲಿ ಕೆಪಿಎಸ್ಸಿಗೆ ಸಂಬಂಧಿಸಿದ ವಿಷಯದಲ್ಲಿ ವಿರೋಧ ಪಕ್ಷದವರೆಲ್ಲ ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದಿದ್ದೇವೆ ಎಂದು ಯತ್ನಾಳ್ ಹೇಳಿದರು.
ಬೆಂಗಳೂರು, ಮಾರ್ಚ್ 4: ಕರ್ನಾಟಕದ ಶಾಸಕರು ಪಡೆಯುತ್ತಿರುವ ಸಂಬಳದ ಪರಿಷ್ಕರಣೆ (revision) ಆಗಬೇಕೇ? ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸದನದಲ್ಲಿ ಈ ವಿಷಯವೇನೂ ಚರ್ಚೆಗೆ ಬಂದಿಲ್ಲ, ಬಂದಾಗ ಮಾತಾಡುತ್ತೇನೆ ಎಂದು ಹೇಳಿದರು. ನಿರ್ದಿಷ್ಟವಾಗಿ ಅವರ ವೈಯಕ್ತಿಕ ಅಭಿಪ್ರಾಯ ಕೇಳಿದಾಗ, ತನಗೇನೂ ಅದರ ಅವಶ್ಯಕತೆಯಿಲ್ಲ, ಅದರೆ ಬೇರೆಯವರು ಏನು ಬಯಸುತ್ತಾರೆ ಅಂತ ತಾನು ಹೇಳಲಾರೆ ಎಂದು ಯತ್ನಾಳ್ ಹೇಳಿದರು. ಕಲಬುರಗಿಯ ಚಿಂಚೊಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ಹೊಂದಿರುವ ಯತ್ನಾಳ್ಗೆ ಶಾಸಕರು ಪಡೆಯುವ ಜುಜುಬಿ ಸಂಬಳ ಯಾಕೆ ಬೇಕಾದೀತು?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಣಿಯದ ಪರಿಸರ ಮಂಡಳಿ, ಮುಂದುವರಿದ ಬಸನಗೌಡ ಪಾಟೀಲ್ ಯತ್ನಾಳ್ ಧರಣಿ!