ಗುಜರಾತ್ನ ವಂತಾರದಲ್ಲಿ ಹುಲಿ ಮರಿಗೆ ಹಾಲು ಕುಡಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾಮ್‌ನಗರದಲ್ಲಿ ವಂತಾರ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಮೂರು ದಿನಗಳ ಪ್ರವಾಸದಲ್ಲಿದ್ದರು. ಇದೇ ವೇಳೆ ವಂತಾರದಲ್ಲಿರುವ ವನ್ಯಜೀವಿ ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಿದರು. ಇದು MRI, CT ಸ್ಕ್ಯಾನ್‌ಗಳು ಮತ್ತು ICUಗಳು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ ವನ್ಯಜೀವಿ ಅರಿವಳಿಕೆ, ಹೃದಯಶಾಸ್ತ್ರ, ಮೂತ್ರಪಿಂಡಶಾಸ್ತ್ರ, ಎಂಡೋಸ್ಕೋಪಿ, ದಂತಚಿಕಿತ್ಸೆ, ಆಂತರಿಕ ಔಷಧ ಇತ್ಯಾದಿ ಸೇರಿದಂತೆ ಬಹು ವಿಭಾಗಗಳಿವೆ.
ಅಹಮದಾಬಾದ್ (ಮಾರ್ಚ್ 4): ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಜಾಮ್‌ನಗರದಲ್ಲಿರುವ ವಂತಾರದಲ್ಲಿ ವನ್ಯಜೀವಿ ಕೇಂದ್ರವನ್ನು ಉದ್ಘಾಟಿಸಿದರು. ಈ ವೇಳೆ ಅಲ್ಲಿನ ಪ್ರಾಣಿಗಳೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ವಂತಾರವು 2,000ಕ್ಕೂ ಹೆಚ್ಚು ಜಾತಿಗಳು ಮತ್ತು 1.5 ಲಕ್ಷಕ್ಕೂ ಹೆಚ್ಚು ರಕ್ಷಿಸಲ್ಪಟ್ಟ ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಅಲ್ಲಿ ಪುನರ್ವಸತಿ ಒದಗಿಸಲಾದ ವಿವಿಧ ಜಾತಿಯ ಪ್ರಾಣಿಗಳೊಂದಿಗೆ ಪ್ರಧಾನಿ ಮೋದಿ ಉತ್ತಮ ಕ್ಷಣಗಳನ್ನು ಕಳೆದರು. ಪ್ರಧಾನಿ ಮೋದಿ ಏಷ್ಯನ್ ಸಿಂಹದ ಮರಿಗಳು ಮತ್ತು ಬಿಳಿ ಸಿಂಹದ ಮರಿಗಳು ಸೇರಿದಂತೆ ವಿವಿಧ ಜಾತಿಯ ಚಿರತೆಗಳಿಗೆ ಆಹಾರ ನೀಡುತ್ತಾ ಆ ಪ್ರಾಣಿಗಳು ಆಟವಾಡುವುದನ್ನು ವೀಕ್ಷಿಸಿದರು. ಪ್ರಧಾನಿ ಮೋದಿ ಸಿಂಹದೊಂದಿಗೆ ಹೈ ಫೈವ್ ಮಾಡುತ್ತಿರುವುದನ್ನು ಸಹ ಈ ವಿಡಿಯೋದಲ್ಲಿ ನೋಡಬಹುದು. ಹಾಗೇ, ಹುಲಿ ಹಾಗೂ ಸಿಂಹದ ಮರಿಗೆ ಬಾಟಲಿಯಲ್ಲಿ ಮೋದಿ ಹಾಲು ಕುಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ