‘ರೈಡರ್’ ಚಿತ್ರ ನೋಡಿ ಜನ ಹೇಗೆ ಕಮೆಂಟ್ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್
Rider Kannada Movie: ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರ ಡಿ.24ರಂದು ರಿಲೀಸ್ ಆಗಿದೆ. ‘ಕೆಲವರು ನನ್ನ ಸಿನಿಮಾ ನೋಡಿ ಉದ್ದೇಶಪೂರ್ವಕವಾಗಿ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ’ ಎಂದು ನಿಖಿಲ್ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಜಕಾರಣಿಯೂ ಹೌದು, ನಟನೂ ಹೌದು. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಅವರಿಗೆ ಆಸಕ್ತಿ ಇದೆ. ಅವರು ಅಭಿನಯಿಸಿರುವ ‘ರೈಡರ್’ ಚಿತ್ರ (Rider Kannada Movie) ಡಿ.24ರಂದು ಬಿಡುಗಡೆ ಆಗಿದೆ. ಚಿತ್ರ ನೋಡಿದ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಟ್ರೋಲ್ ಎಂಬುದು ನಿಖಿಲ್ ಪಾಲಿಗೆ ಹೊಸದೇನೂ ಅಲ್ಲ. ಅವುಗಳನ್ನೆಲ್ಲ ಅವರು ಎದುರಿಸಿದ್ದಾರೆ. ಶನಿವಾರ (ಡಿ.25) ‘ರೈಡರ್’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸೇರಿದಂತೆ ಅನೇಕ ಗಣ್ಯರು ಸಿನಿಮಾ ವೀಕ್ಷಿಸಿದರು. ಪ್ರದರ್ಶನದ ಬಳಿಕ ಮಾಧ್ಯಮದ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಕೆಲವು ವಿಚಾರಗಳನ್ನು ತೆರೆದಿಟ್ಟರು. ‘ತುಂಬ ಸಿನಿಮಾಗಳು ರಿಲೀಸ್ ಆಗುತ್ತಿವೆ. ಪರಭಾಷೆಗಿಂತಲೂ ಮೊದಲು ಕನ್ನಡ ಚಿತ್ರಕ್ಕೆ ಆದ್ಯತೆ ನೀಡಿ ಅಂತ ಜನರಲ್ಲಿ ಕೇಳಿಕೊಳ್ಳುತ್ತೇನೆ. ಅಕ್ಕ-ಪಕ್ಕದ ರಾಜ್ಯದಲ್ಲಿ ಕನ್ನಡ ಸಿನಿಮಾ ಹಾಕಲ್ಲ. ಹಾಕಿದ್ರೂ ಅಲ್ಲಿ ಬೆಲೆ ಸಿಗುತ್ತಿಲ್ಲ. ಕೆಲವರು ನನ್ನ ಸಿನಿಮಾ ನೋಡಿ ಉದ್ದೇಶಪೂರ್ವಕವಾಗಿ ಕೆಟ್ಟ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಸಿನಿಮಾ ನೋಡಿದವರು ಅದಕ್ಕೆ ಉತ್ತರ ನೀಡುತ್ತಿದ್ದಾರೆ’ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ:
‘ಚಿತ್ರರಂಗಕ್ಕೆ ಪುನೀತ್ ರೀತಿಯ ನಟ ಬೇಕು; ನಿಖಿಲ್ ಹೆಚ್ಚು ಸಿನಿಮಾ ಮಾಡಲಿ’: ಎಚ್.ಡಿ. ಕುಮಾರಸ್ವಾಮಿ
ನ್ಯೂ ಇಯರ್ ಪಾರ್ಟಿಗೆ ರಾಧಿಕಾ ಕುಮಾರಸ್ವಾಮಿ ರಂಗು; ಕಲರ್ಸ್ ಕನ್ನಡದಲ್ಲಿ ಮಸ್ತ್ ಡ್ಯಾನ್ಸ್