ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ

|

Updated on: Sep 23, 2023 | 2:53 PM

ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿಖಿಲ್ ಜಾಣ್ಮೆಯ ಉತ್ತರ ನೀಡಿದರು. ಜೆಡಿಎಸ್ ಪಕ್ಷದ ಗಮನ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಮೇಲಿದೆ ಕೇವಲ ಮಂಡ್ಯದ ಮೇಲೆ ಮಾತ್ರ ಇಲ್ಲ ಎಂದು ನಿಖಿಲ್ ಹೇಳಿದಾಗ ನೀವು ಮಂಡ್ಯದಿಂದ ಸ್ಪರ್ಧೆ ಮಾಡ್ತೀರಾ ಅಂತ ಮಾಧ್ಯಮದವರು ಕೇಳಿದರು. ತಾನು ಸ್ಪರ್ಧಿಸಲ್ಲ ಮತ್ತು ಆಕಾಂಕ್ಷಿಯೂ ಅಲ್ಲ, ಸದ್ಯಕ್ಕಂತೂ ಆ ಯೋಚನೆ ಇಲ್ಲ ಎಂದು ನಿಖಿಲ್ ಹೇಳಿದರು.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಕೇಳಿದ ಪ್ರಶ್ನೆಗೆ ಕೇವಲ ಅವರಿಗೆ ಮಾತ್ರವಲ್ಲ ಜೆಡಿಎಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ನಾಯಕರಿಗೆ ಇಕ್ಕಟ್ಟಿಗೆ ಸಿಲುಕಿಸುವಂಥದ್ದು. ಎರಡು ಪಕ್ಷಗಳ ನಡುವೆ ಮೈತ್ರಿ ಖಚಿತವಾಗಿರರುವ ಹಿನ್ನೆಲೆಯಲ್ಲಿ ನಿಖಿಲ್, ಹಿಂದೆ ಜೆಡಿಎಸ್ ಭದ್ರಕೋಟೆ (JDS stronghold) ಅನಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವರೇ? ಹಾಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವುದು ನಿಜವಾದರೂ ಅವರೀಗ ಎನ್ ಡಿ ಎ ಮೈತ್ರಿಕೂಟದ ಭಾಗವಾಗಿದ್ದಾರೆ. 2019 ರಲ್ಲಿ ನಿಖಿಲ್, ಸುಮಲತಾ ವಿರುದ್ಧ ಸೋತಿದ್ದರು. ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿಖಿಲ್ ಜಾಣ್ಮೆಯ ಉತ್ತರ ನೀಡಿದರು. ಜೆಡಿಎಸ್ ಪಕ್ಷದ ಗಮನ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳ ಮೇಲಿದೆ ಕೇವಲ ಮಂಡ್ಯದ ಮೇಲೆ ಮಾತ್ರ ಇಲ್ಲ ಎಂದು ನಿಖಿಲ್ ಹೇಳಿದಾಗ ನೀವು ಮಂಡ್ಯದಿಂದ ಸ್ಪರ್ಧೆ ಮಾಡ್ತೀರಾ ಅಂತ ಮಾಧ್ಯಮದವರು ಕೇಳಿದರು. ತಾನು ಸ್ಪರ್ಧಿಸಲ್ಲ ಮತ್ತು ಆಕಾಂಕ್ಷಿಯೂ ಅಲ್ಲ, ಸದ್ಯಕ್ಕಂತೂ ಆ ಯೋಚನೆ ಇಲ್ಲ ಎಂದು ನಿಖಿಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on