ಸಂಘಟನೆಗಳು ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ: ಡಿಕೆ ಶಿವಕುಮಾರ್

ಸಂಘಟನೆಗಳು ಬಂದ್ ಆಚರಿಸುವ ಬದಲು ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಲಿ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 23, 2023 | 5:01 PM

ಸರ್ಕಾರ ನಡೆಸುತ್ತಿರುವ ಹೋರಾಟದ ಮೇಲೆ ವಿಶ್ವಾಸವಿರಲಿ ಎಂದು ಹೇಳಿದ ಶಿವಕುಮಾರ್ ಬಂದ್ ಆಚರಣೆ ಮಾಡೋದು ಬೇಡ ಎಂದು ಸಂಘಟನೆಗಳ ಮುಖಂಡರಿಗೆ ವಿನಂತಿ ಮಾಡಿಕೊಂಡರು. ಬಂದ್ ಮಾಡುವ ಬದಲು ಸಂಘಟನೆಗಳೆಲ್ಲ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಹಕಾರ ನೀಡಲಿ ಎಂದು ಅವರು ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು (various oraganisations) ಮಂಗಳವಾರ ಬೆಂಗಳೂರು ಬಂದ್ (Bengaluru Bandh) ಅಚರಿಸಲು ಕರೆ ನೀಡಿವೆ. ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಅವರೆಲ್ಲ ಬೆಂಗಳೂರು ಬಂದ್ ಆಚರಿಸಿದರೆ ತಮ್ಮ ಹೃದಯಕ್ಕೆ ತಾವೇ ಘಾಸಿ ಮಾಡಿಕೊಂಡಂತೆ, ಬಂದ್ ಆಚರಣೆಯಿಂದ ಆಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದರು. ಮುಂದುವರಿದು ಮಾತಾಡಿದ ಅವರು, ಎಲ್ಲರ ಪರವಾಗೇ ತಮ್ಮ ಸರ್ಕಾರ ಹೋರಾಟ ನಡೆಸಿದೆ, ಸರ್ಕಾರ ನಡೆಸುತ್ತಿರುವ ಹೋರಾಟದ ಮೇಲೆ ವಿಶ್ವಾಸವಿರಲಿ ಎಂದು ಹೇಳಿ ಬಂದ್ ಆಚರಣೆ ಮಾಡೋದು ಬೇಡ ಎಂದು ಸಂಘಟನೆಗಳ ಮುಖಂಡರಿಗೆ ವಿನಂತಿ ಮಾಡಿಕೊಂಡರು. ಬಂದ್ ಮಾಡುವ ಬದಲು ಸಂಘಟನೆಗಳೆಲ್ಲ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಸಹಕಾರ ನೀಡಲಿ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ