ಅಬ್ಬಬ್ಬಾ ಕಾಂತಾರ ಕ್ರೇಜ್: ಪ್ರೀಮಿಯರ್ ಶೋ ನೋಡಲು ಬಂದ ಜನಸಾಗರ

Updated on: Oct 01, 2025 | 8:14 PM

‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದ್ದು, ಅ.1ರ ಸಂಜೆಯೇ ಪ್ರೀಮಿಯರ್ ಶೋ ಆರಂಭ ಆಗಿದೆ. ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶಿಸಿದ ಈ ಸಿನಿಮಾವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಬೆಂಗಳೂರಲ್ಲಿ ಪ್ರೀಮಿಯರ್ ಶೋಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆ ಆಗುತ್ತಿದ್ದು, ಅಕ್ಟೋಬರ್ 1ರ ಸಂಜೆಯೇ ಪ್ರೀಮಿಯರ್ ಶೋ ಶುರುವಾಗಿದೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಈ ಸಿನಿಮಾ ನೋಡಲು ಸಿನಿಪ್ರಿಯರು ಮುಗಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಪ್ರೀಮಿಯರ್ ಶೋಗೆ (Kantara Chapter 1 Premiere Show) ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಜನರು ಕಿಕ್ಕಿರಿದು ಬಂದಿದ್ದಾರೆ. ಕುಟುಂಬ ಸಮೇತರಾಗಿ ಬಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ಈ ಸಿನಿಮಾ ಬಹುದೊಡ್ಡ ಓಪನಿಂಗ್ ಪಡೆದುಕೊಳ್ಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.