Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ

ವೇದಿಕೆಗಳಲ್ಲಿ ದೈವಾರಾಧನೆ ಅಣಕ ಮಾಡುವವರಿಗೆ ರಿಷಬ್​ ಶೆಟ್ಟಿ ಖಡಕ್ ಎಚ್ಚರಿಕೆ

ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಮದನ್​ ಕುಮಾರ್​

Updated on: Oct 09, 2024 | 11:01 PM

ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿ ಮಂಗಳೂರಿಗೆ ವಾಪಸ್​ ಬಂದಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ಅವರು ದೈವಾರಾಧನೆಯ ಬಗ್ಗೆ ಮಾತನಾಡಿದ್ದಾರೆ. ದೈವದ ಆಶೀರ್ವಾದ ಇಲ್ಲದೇ ಇದ್ದರೆ ಈ ಮಟ್ಟಕ್ಕೆ ನಾವು ಹೋಗಲು ಸಾಧ್ಯವೇ ಇರಲಿಲ್ಲ. ಅದನ್ನೆಲ್ಲ ಯೋಚನೆಯೂ ಮಾಡೋಕೆ ಆಗಲ್ಲ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

‘ದೈವಾರಾಧನೆ ಬಗ್ಗೆ ಕಾಂತಾರ ಸಿನಿಮಾಗಿಂತಲೂ ಮುನ್ನ ಬೇರೆ ಚಿತ್ರಗಳಲ್ಲಿ ಕೂಡ ತೋರಿಸಲಾಗಿತ್ತು. ಇದು ಜನಪ್ರಿಯ ಆದಾಗ ಮೂಲ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲದೇ ಇರುವವರು ಅದನ್ನು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅಣಕ ಮಾಡಿದಾಗ, ಅಪಹಾಸ್ಯ ಮಾಡಿದಾಗ ದೈವವನ್ನು ನಂಬುವ ನಮ್ಮಂಥವರಿಗೆ ಬೇಸರ ಆಗುತ್ತದೆ. ಮತ್ತೆ ಮತ್ತೆ ವೇದಿಕೆಗಳಲ್ಲಿ ಆ ರೀತಿ ಮಾಡಬಾರದು ಅಂತ ನಾನು ಮನವಿ ಮಾಡುತ್ತೇನೆ. ನಾವು ಕಾಂತಾರ ಮಾಡಿದಾಗ ಅದನ್ನು ಸಿನಿಮಾದ ರೀತಿ ಮಾಡಿಲ್ಲ. ಆ ಸಮುದಾಯದವರ ಸಹಾಯ ತೆಗೆದುಕೊಂಡು ಶ್ರದ್ಧೆಯಿಂದ, ನಿಜವಾಗಿ ದೈವದ ಸೇವೆ ಎಂಬ ಆಲೋಚನೆಯಲ್ಲಿ ಮಾಡಿದ್ದೆವು’ ಎಂದಿದ್ದಾರೆ ರಿಷಬ್​ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.