SIIMA 2022: ‘ಸೈಮಾ’ ಪಾರ್ಟಿ; ಯಶ್, ಅಭಿಷೇಕ್ ಅಂಬರೀಷ್ ಭಾಗಿಯಾಗಿದ್ದ ಪಾರ್ಟಿ ವಿಡಿಯೋ ಇಲ್ಲಿದೆ
Yash | Abhishek Ambareesh: ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಸೈಮಾ’ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ಸಮಾರಂಭದ ಆಯೋಜಕರ ವಿರುದ್ಧ ಕೇಸ್ ದಾಖಲಾಗಿದೆ.
ಕೆಲವೇ ದಿನಗಳ ಹಿಂದೆ ಸಾಕಷ್ಟು ಸಂಭ್ರಮ, ಸಡಗರದಿಂದ ನಡೆದಿದ್ದ ‘ಸೈಮಾ’ (SIIMA Awards 2022) ಸಮಾರಂಭಕ್ಕೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಳಿಕ ಐಷಾರಾಮಿ ಹೋಟೆಲ್ನಲ್ಲಿ ಸೈಮಾ ಪಾರ್ಟಿ ನಡೆದಿತ್ತು. ಇದರಲ್ಲಿ ಕನ್ನಡ, ತೆಲುಗು, ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ನಿಯಮ ಮೀರಿ ನಸುಕಿನ 3.30ರವರೆಗೆ ಪಾರ್ಟಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸೈಮಾ ಪಾರ್ಟಿಯಲ್ಲಿ ‘ರಾಕಿಂಗ್ ಸ್ಟಾರ್’ ಯಶ್ (Yash), ಅಭಿಷೇಕ್ ಅಂಬರೀಷ್ (Abhishek Ambareesh) ಭಾಗಿಯಾಗಿದ್ದ ವಿಡಿಯೋ ಇಲ್ಲಿದೆ..
Published on: Sep 21, 2022 09:20 AM