ವಂಚಕ ರೋಹನ್ ಸಲ್ಡಾನಾನ ಐಷಾರಾಮಿ ಮನೆ ನೋಡಿ ಬೇಸ್ತು ಬೀಳುತ್ತಿದ್ದರೇ ದೊಡ್ಡ ಉದ್ಯಮಿಗಳು?
ಪೊಲೀಸರು ಅವನನ್ನು ಈಗ ಬಂಧಿಸಿದ್ದಾರೆ ಆ ಪ್ರಶ್ನೆ ಬೇರೆ, ಅದರೆ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಉದ್ಯಮಗಳನ್ನು ನಡೆಸುವ ಜನ ಇವನ ಬಲೆಗೆ ಹೇಗೆ ಬೀಳುತ್ತಿದ್ದರು ಅಂತ ಆಶ್ಚರ್ಯವಾಗುತ್ತದೆ. ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುತ್ತೇನೆ ಅಂತ ಹೇಳಿ ನಂಬಿಸುತ್ತಿದ್ದನೇನೋ? ಸಾಲ ಕೊಡಿಸು ಅಂತ ಇವನಲ್ಲಿಗೆ ಬರುತ್ತಿದ್ದ ಜನ ಮನೆ ಮತ್ತು ಅವನ ಮಾತುಕೇಳಿ ಬೇಸ್ತು ಬೀಳುವುದರ ಜೊತೆಗೆ ಉಪಚಾರದ ನೆಪದಲ್ಲಿ ಅವನು ನೀಡುತ್ತಿದ್ದ ವಿದೇಶೀ ವ್ಹಿಸ್ಕಿ ನಂಬಿಕೆ ಹುಟ್ಟಿಸುತಿತ್ತು.
ಮಂಗಳೂರು, ಜುಲೈ 18: ಇವನು ವಂಚಕ ಅಂತ ಹೇಳಿದರೆ ಸರಿಯೆನಿಸಲಾರದು, ಯಾಕೆ ಅಂತೀರಾ? ವಂಚಕ ಪದ ಇವನ ಮುಂದೆ ಚಿಕ್ಕದಾಗಿ ಕಾಣುತ್ತದೆ. ಅಂದಹಾಗೆ, ನಾವು ಮಾತಾಡುತ್ತಿರುವ ವ್ಯಕ್ತಿಯ ಹೆಸರು ರೋಹನ್ ಸಲ್ಡಾನಾ (Rohan Saldhana), ವಯಸ್ಸು 45 ಮತ್ತು ಪ್ರಾಯಶಃ ಮಂಗಳೂರಿನವನು. ಇವನ ಮೋಡಸ್ ಅಪರಂಡಿ ಎಂದರೆ ಭಾರೀ ಮೊತ್ತದ ಸಾಲಗಳನ್ನು ಕೊಡಿಸುತ್ತೇನೆಂದು ದೇಶದ ನಾನಾಭಾಗದ ಉದ್ಯಮಿಗಳನ್ನು ತನ್ನ ನಯಗಾರಿಕೆ ಮಾತುಗಳಿಂದ ನಂಬಿಸುವುದು, ಬುಟ್ಟಿಗೆ ಬಿದ್ದನಂತರ ಭಾರೀ ಮೊತ್ತದ ಕಮೀಶನ್ ಅವರಿಂದ ಪಡೆದು ಸಾಲ ಕೊಡಿಸದೆ ವಂಚಿಸುವುದು. ರೋಹನ್ ಸಲ್ಡಾನಾ ಮನೆ ನೋಡಿ ಹೇಗಿದೆ? ಪ್ರಾಯಶಃ ಇದನ್ನು ನೋಡಿಯೇ ಉದ್ಯಮಿಗಳು ಟೋಪಿ ಹಾಕಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ: 357 ಬ್ಯಾಂಕ್ ಖಾತೆ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಬೆಂಗಳೂರಿನ ಗ್ಯಾಂಗ್ ಪತ್ತೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
