ರಾನಿ ಸಿನಿಮಾ ಟೀಸರ್ ಬಿಡುಗಡೆ: ಸಿನಿಮಾ ಬಗ್ಗೆ ಕಿರಣ್ ರಾಜ್ ಭಾವುಕ ಮಾತು
ಕನ್ನಡತಿ ಧಾರಾವಾಹಿ ಖ್ಯಾತಿಯ ಕಿರಣ್ ರಾಜ್ ನಟನೆಯ ರಾನಿ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ ಕಿರಣ್ ರಾಜ್.
ಕನ್ನಡತಿ (Kannadathi) ಧಾರಾವಾಹಿ (Serial) ಖ್ಯಾತಿಯ ಕಿರಣ್ ರಾಜ್ (Kiran Raj) ನಟನೆಯ ರಾನಿ ಸಿನಿಮಾದ ಟೀಸರ್ ಅವರ ಹುಟ್ಟುಹಬ್ಬದ ದಿನದಂದು ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ಕಿರಣ್ ರಾಜ್, ರಾನಿ ಎಂಬುದು ಕೇವಲ ಸಾಮಾನ್ಯ ಸಿನಿಮಾ ಅಲ್ಲ ಇದೊಂದು ಕನಸು. ಚಿತ್ರತಂಡದ ಎಲ್ಲರೂ ಬಹಳ ಶ್ರಮಪಟ್ಟು, ಬೆವರು ಹರಿಸಿ ಮಾಡಿರುವ ಸಿನಿಮಾ ಇದು ಎಂದಿದ್ದಾರೆ. ಅಭಿಮಾನಿಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ